ಹೋಟೆಲ್ ಉದ್ಯಮಿ ಕಾಪು ಮಲ್ಲಾರ್ ಡಿ.ಕೆ ಪೂಜಾರಿ ನಿಧನ
ಮುಂಬಯಿ: ಹಿರಿಯ ಸಮಾಜ ಸೇವಕ ,ಹೋಟೇಲು ಉದ್ಯಮಿ ಡಿ. ಕೆ. ಪೂಜಾರಿಯವರು (78)
ಆ.1ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಸಾಮಾಜಿಕ, ಧಾರ್ಮಿಕ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದರ್ಶ ಹಾಗೂ ಸಾರ್ಥಕ ಜೀವನವನ್ನು ನಡೆಸಿರುವ ಡಿ.ಕೆ. ಪೂಜಾರಿಯವರು ಬಿಲ್ಲವರ ಅಸೋಸಿಯೇಷನ್ ಮುಂಬಯಿ ಇದರ ಘಾಟ್ಕೋಪರ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷರಾಗಿ , ಅಸಲ್ಪಾ ಇಲ್ಲಿನ
ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ದೇವಸ್ಥಾನ, ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಹಾಗೂ ಕರ್ನಾಟಕ ಸಂಘ ಇದರ ಮಾಜಿ ಅಧ್ಯಕ್ಷರಾಗಿ, ಹುಟ್ಟೂರಿನ ಕುದಿ ಗ್ರಾಮದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿರುವರು. ಅಲ್ಲದೆ ಇವೆಲ್ಲದರ ಅಭಿವೃದ್ಧಿಗೆ ಶ್ರಮಿಸಿ ಅಮೂಲ್ಯ ಕೊಡುಗೆಯನ್ನು ನೀಡಿದವರಾಗಿರುವರು. ಬಿಲ್ಲವರ ಅಸೋಸಿಯೇಶನ್ ಘಾಟ್ಕೋಪರ್ ಸ್ಥಳೀಯ ಕಚೇರಿಗೆ ಜಾಗವನ್ನು ಕೊಡಾ ಡಿ .ಕೆ .ಪೂಜಾರಿಯವರು ಒದಗಿಸಿಕೊಟ್ಟಿದ್ದಾರೆ.
ಮುಲುಂಡ್ ಪಶ್ಚಿಮದ ವೈಶಾಲಿ ನಗರ, ಕಲ್ಪನಾ ನಗರಿ ದೈವತ್ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಡಿ.ಕೆ. ಪೂಜಾರಿಯವರು ಹಿರಿಯ ಹೋಟೆಲು ಉದ್ಯಮಿಯಾಗಿ ಗುರುತಿಸಿಕೊಂಡಿದ್ದು ಘಾಟ್ಕೋಪರ್ ಅಸಲ್ಪೆಯಲ್ಲಿ ಮಲ್ಲಿಕಾ ಹೋಟೆಲನ್ನು ಹೊಂದಿದ್ದರು.
ಮೂಲತಃ ಕಾಪು ಮಲ್ಲಾರ್ ಸಿಂಧು ನಿವಾಸದವರಾಗಿದ್ದ
ಡಿ. ಕೆ .ಪೂಜಾರಿಯವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.
