ಬಿರುವೆರ್ ಕಾಪು ಸೇವಾ ಟ್ರಸ್ಟ್ ನಿಂದ ದಾರಿಸೂಚಿ ನಾಮಫಲಕ ಹಸ್ತಾಂತರ
ಬಿರುವೆರ್ ಕಾಪು ಸೇವಾ ಟ್ರಸ್ಟ್ ಕಾಪು ತಾಲೂಕು ಉಡುಪಿ ಜಿಲ್ಲೆ ಇದರ 4ನೇ ವರ್ಷದ ಪಾದರ್ಪಣೆಯ ಸುಸಂದರ್ಭದಲ್ಲಿ ವಿಜೇತ ವಸತಿಯುತ ವಿಶೇಷ ಶಾಲೆ ನೂತನವಾಗಿ ಸ್ಥಳಾಂತರಗೊಂಡ ಅಯ್ಯಪ್ಪನಗರ, ದುರ್ಗಾ ಹೈಸ್ಕೂಲ್ ಕಟ್ಟಡದಲ್ಲಿ ಜೋಡುರಸ್ತೆ ಹೆಬ್ರಿ ಹೆದ್ದಾರಿಯಲ್ಲಿ ದಾರಿಸೂಚಿ ನಾಮಫಲಕ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು .
ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶೇಷ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಕೂಡ ತಮ್ಮ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದರು.
4ನೇ ವರ್ಷದ ಸಂಭ್ರಮದ ಪ್ರಯುಕ್ತ ಶಾಲಾ ಸಂಸ್ಥಾಪಕಿ ಡಾ.ಕಾಂತಿ_ಹರೀಶ್ ಇವರಿಗೆ ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೋಟ್ಯಾನ್ ರವರ ಸುಪುತ್ರ ಶ್ರೀ ವರುಣ್, ಶ್ರಿ ಮನೋಹರ್, ಶ್ರೀ ಕಾರ್ತಿಕ್, ಶ್ರೀ ಅತಿಥ್, ಶ್ರೀ ಪ್ರಶಾಂತ್ ಪೂಜಾರಿ, ಶ್ರೀ ಅನಿಲ್ ಕಾಪು, ಶ್ರೀ ವಿಕ್ಕಿ ಪೂಜಾರಿ,
ಶ್ರೀ ದೇವಿಪ್ರಸಾದ್,ಯೋಗೀಶ್ ಬಿಲ್ಲವ ಮತ್ತು ಶಾಲಾ ಟ್ರಸ್ಟಿ ಶ್ರೀ ಸಂತೋಷ್ ನಾಯಕ್ ಸಿಯಾ ಉಪಸ್ಥಿತರಿದ್ದರು
