ಉಡುಪಿಯಲ್ಲಿ ಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ವೃದ್ಧೆಯ ರಕ್ಷಣೆ
Thumbnail
ಉಡುಪಿ,ಅ.6; ವೃದ್ಧೆಯೊರ್ವರು ಮನೆಯ ನೀರಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಉಡುಪಿ ನಗರ ಠಾಣೆಯ ಪಿ.ಎಸ್.ಐ-2 ಸದಾಶಿವ ರಾ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳಿಯ ಆಟೋ ಚಾಲಕ ರಾಜೇಶ್ ನಾಯಕ್ ಇರ್ವರು ಬಾವಿಗಿಳಿದು ರಕ್ಷಿಸಿದ ಘಟನೆಯು ಕುಕ್ಕಿಕಟ್ಟೆ ಮಾರ್ಪಳ್ಳಿಯಲ್ಲಿ ಗುರುವಾರ ನಡೆದಿದೆ. . ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಮತ್ತು ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲು ಅವರು ಅಭಿನಂದನೆ ಸಲ್ಲಿಸಿದ್ದಾರೆ. ಆಪತ್ಬಾಂದವರು
Additional image Additional image
06 Aug 2020, 06:32 PM
Category: Kaup
Tags: