ಎಲ್ಲರಿಗೂ ಮಾದರಿಯಾದ ವಿಶೇಷ ಅಭಿಯಾನ ಗೋವಿಗಾಗಿ ಮೇವು
ಗೋವನ್ನು ಹಿಂದೂ ಧಮ೯ದಲ್ಲಿ ಪ್ರಾಮುಖ್ಯವಾದ ಸ್ಥಾನದಲ್ಲಿ ನೋಡಲಾಗುತ್ತದೆ ಆದರೆ ದೇಶದಲ್ಲಿ ಇಂದು ಗಣನೀಯ ಪ್ರಮಾಣದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ದು:ಖದ ವಿಚಾರ. ಸ್ವಾತಂತ್ರ್ಯ ಪೂವ೯ದಲ್ಲಿ ದೇಶದಲ್ಲಿ ಜನರ ಸಂಖ್ಯೆಗಿಂತ ಜಾನುವಾರುಗಳ ಸಂಖ್ಯೆ ಹೆಚ್ಚಾಗಿತ್ತು ಆದರೆ ಇಂದು ತದ್ವಿರುದ್ಧವಾಗಿದೆ.
ಕೃಷಿಯು ಕಡಿಮೆಯಾದ ಪರಿಣಾಮ ಗೋವನ್ನು ಸಾಕಣೆಕೆ ಮಾಡುವವರು ಕಡಿಮೆಯಾಗಿದ್ದಾರೆ.
ಗೋ ವನ್ನು ವದೆ ಮಾಡುವ ಸಲುವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವಾಗ ಅರಕ್ಷರ ರು ತಡೆಹಿಡಿದ ಜಾನುವಾರುಗಳು ಅದೇ ರೀತಿ ಗೋವನ್ನು ಸಾಕಲಾರದೆ ಕಷ್ಟದಲ್ಲಿರುವ ಕುಟುಂಬದ ಗೋವನ್ನು ಸಾಕಿ ಸಲಹುವ ದೃಷ್ಠಿಯಿಂದ ಅಪ್ಪಟ್ಟ ಗೋ ಪ್ರೇಮಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀಥ೯ ಶ್ರೀಪಾದರು ನೀಲಾವರ ಗೋ ಶಾಲೆಯನ್ನು ಸ್ಥಾಪನೆ ಮಾಡಿದ್ದಾರೆ.
ಶಾಖಾ ಗೋಶಾಲೆ ಕೊಡವೂರು ಮತ್ತು ಹೆಬ್ರಿ ಯಲ್ಲಿದೆ ದಿನಂಪ್ರತಿ ಲಕ್ಷಾoತರ ರೂಪಾಯಿ ಖಚು೯ ಮಾಡಿ ಅದನ್ನು ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕರೋನಾ ಎಂಬ ಮಹಾಮಾರಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತೊಂದರೆ ನೀಡಿದೆ. ಲಾಕ್ ಡೌನ್ ನಿಂದಾಗಿ ಜಾನುವಾರುಗಳಿಗೆ ಹಸಿರು ಹುಲ್ಲಿನ ಕೊರತೆ ಕಾಡಿತ್ತು.ಈ ಸಂದಭ೯ದಲ್ಲಿ ಮಂದಾತಿ೯ಯ ಯುವಕರು ಒಂದೆಡೆ ಸೇರಿ ಯುವ ಮುಂದಾಳು
ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಯವರ ಸಂಚಾಲಕತ್ವದಲ್ಲಿ ಕಾಮಧೇನು ಗೋ ಸೇವಾ ಸಮಿತಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಆ ಮೂಲಕ " ಗೋವಿಗಾಗಿ ಮೇವು " ಎಂಬ ಅಭಿಯಾನವನ್ನು ಪ್ರಾರಂಭಿಸಿದರು.ಇದೀಗ ಈ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಈ ಜಾನುರಾರುಗಳಿಗೆ ಮೇವು ನೀಡುವ ಕಾಯಕದಲ್ಲಿ ತೊಡಗಿವೆ. ಒಂದು ಅಭಿಯಾನ ಈ ರೀತಿಯಲ್ಲಿ ಕೂಡ ಮಾಡ ಬಹುದು ಎಂಬುದಾಗಿ ಕಾಮಧೇನು ಗೋ ಸೇವಾ ಸಮಿತಿ ಸಮಾಜಕ್ಕೆ ತೋರಿಸಿದೆ.ಈ ಸಂಸ್ಥೆಗೆ ಎಷ್ಟು ಅಭಿನಂದನೆ ಹೇಳಿದರೂ ಕಡಿಮೆಯೇ ಯುವಕರಿಗೆ ಮಾದರಿಯಾದ ಈ ಕಾಯ೯ ಮಾಡಿದ ಈ ಸಂಸ್ಥೆಗೆ ಶ್ರೀಗಳು ಸಹಿತ ನಾಡಿನ ಹಲವಾರು ಗಣ್ಯರು ಅಭಿನಂದಿಸಿದ್ದಾರೆ.
ತಾವು ಕೂಡ ಈ ಗೋ ಸೇವೆ ಮಾಡಬಹುದು ಈ ಮೂಲಕ ದೇವರ ಸೇವೆ ಮಾಡಲು ಅವಕಾಶವಿದೆ.
ಬರಹ : ರಾಘವೇಂದ್ರ ಪ್ರಭು,ಕವಾ೯ಲು
