ಜನರು ಸ್ವಯಂ ಪ್ರೇರಿತವಾಗಿ ಕರೋನಾ ಪರೀಕ್ಷೆ ಮಾಡಲು ಮುಂದೆ ಬರಬೇಕಾಗಿದೆ
ಕೋವಿಡ್ ಸೋoಕು ಜನರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಆದರೆ ಇತ್ತಿಚಿಗೆ ಈ ಸೋಂಕು ಸಮುದಾಯಕ್ಕೆ ಹಬ್ಬಿರುವ ಕಾರಣ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ, ಆದರೆ ಈ ಸೋಂಕಿನ ಬಗ್ಗೆ ಜನರು ನಿಲ೯ಕ್ಷ ವಹಿಸುದನ್ನು ನಾವು ಕಾಣಬಹುದು.ಮುಖ್ಯವಾಗಿ ಸಾವ೯ಜನಿಕ ಸಮೂಹದಲ್ಲಿ ಮಾಸ್ಕ್ ಇಲ್ಲದೆ ಓಡಾಟ, ಕಾಯ೯ಕ್ರಮ ಅಯೋಜನೆ ಜೊತೆಗೆ ಯಾವುದೇ ರೀತಿಯ ಕರೋನಾ ನಿಯಮಗಳನ್ನು ಪಾಲನೆ ಮಾಡದಿರುವುದು. ಕರೋನಾದ ಲಕ್ಷಣ ಇದ್ದರೂ ಅದನ್ನು ಮರೆ ಮಾಚಿ ಸಾವ೯ಜನಿಕವಾಗಿ ಓಡಾಟ ಇದನ್ನು ನಾವು ಕಾಣುತ್ತಿದ್ದೇವೆ ಇದು ಸರಿಯಲ್ಲ ಕರೋನಾದ ಕುರಿತು ನಾವು ನಿಲ೯ಕ್ಷ ವಹಿಸಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ.
ಜಿಲ್ಲಾಧಿಕಾರಿಯವರು ಈಗಾಗಲೇ ತಿಳಿಸಿದಂತೆ ಕರೋನಾ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಲು ಮುಂದೆ ಬರದೆ ಆರೋಗ್ಯಕ್ಕೆ ಹೆಚ್ಚಿನ ತೊಂದರೆಯಾದಾಗ ಆಸ್ಪತ್ರೆಗೆ ಐಸಿಯು ಗೆ ದಾಖಲಾಗುವುದು ಹೆಚ್ಚಾಗಿರುತ್ತಿದೆ. ಇದರಿಂದ ಈಗಾಗಲೇ ಐಸಿಯು ಬೆಡ್ ಗಳ ಕೊರತೆ ಕಂಡು ಬರಲು ಸಾಧ್ಯ .ಹೀಗಾಗಿ ಕರೋನಾ ದ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಬೇಕಾಗಿದೆ.
ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ಗೆಗೆ ಒಳಗಾಗಬೇಕಾಗಿದೆ.
ಸಕಾ೯ರ ಕರೋನಾದ ಬಗ್ಗೆ ಪರೀಕ್ಷೆ ಮಾಡಲು ಉಚಿತವಾಗಿ ಪರೀಕ್ಷೆ ಕಿಟ್ ಒದಗಿಸುತ್ತಿದೆ. ಆದರೆ ಜನರು ಸ್ವಯಂ ಪ್ರೇರಿತವಾಗಿ ಈ ಕರೋನಾ ಪರೀಕ್ಷೆ ಮಾಡಲು ಹಿಂಜರಿಯುತ್ತಿದ್ದಾರೆ ಇದು ಸರಿಯಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ನಾವು ಪರೀಕ್ಷೆ ಮಾಡಿದರೆ ನಮಗೆ ಒಳ್ಳೆಯದು ಇದನ್ನು ಎಲ್ಲರೂ ಮನಗಾಣಬೇಕು. ಕರೋನಾವನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಪಣ ತೊಡಬೇಕು.
ಕರೋನಾದ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಬೇಕಾಗಿದೆ
ಜನರು ಕರೋನಾಕ್ಕಿಂತ ಹೆಚ್ಚು ಭಯಪಡುತ್ತಿರುವುದು ಮನೆ ಸೀಲ್ ಡೌನ್ ಗೆ. ಅದೇ ರೀತಿ ಇವರನ್ನು ನೋಡಿದಾಗ ಪಕ್ಕದ ಮನೆಯವರು ನೋಡುವ ರೀತಿ, ಮನೆಗೆ ನೋಟಿಸ್ ಅಂಟಿಸುವುದು ಇದರಿಂದ ಮಾನಸಿಕವಾಗಿ ಕಿರಿಕಿರಿ ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಈ ಬಗ್ಗೆ ತಜ್ಞರ ತಂಡ ಸಕಾ೯ರಕ್ಕೆ ವರದಿ ನೀಡಿದೆ.ಸಕಾ೯ರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಕರೋನಾ ದೂರವಾಗಲು ಪರೀಕ್ಷೆ ಅತ್ಯಂತ ಮುಖ್ಯ ಎಂದು ವೈದ್ಯರ ಮಾತಿನಂತೆ ಹೆಚ್ಚು ಪರೀಕ್ಷೆ ನಡೆದರೆ ಸೋಂಕಿತರ ಸಂಖ್ಯೆ ಹೆಚ್ಚಾದರೂ ಮುಂದಿನ ದಿನಗಳಲ್ಲಿ ಕರೋನಾ ಕಡಿಮೆಯಾಗಲು ಸಾಧ್ಯ. ಜಿಲ್ಲಾಡಳಿತ ಹಾಗೂ ಕರೋನಾ ವಾರಿಯರ್ಸ್ ಗಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ
ಕಳೆದ 6 ತಿಂಗಳಿನಿಂದ ನಿರಂತರವಾಗಿ ಜಿಲ್ಲಾಡಳಿತ ಮತ್ತು ಸಮಸ್ತ ವೈದ್ಯರ ತಂಡ ಶ್ರಮಿಸುತ್ತಿದೆ ಇವರೊಂದಿಗೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ. ಆದಷ್ಟು ಬೇಗ ಕರೋನಾ ಮುಕ್ತ ದೇಶವಾಗಲಿ ಮತ್ತೊoಮ್ಮೆ ಭಾರತ ಎದ್ದು ನಿಲ್ಲಲಿ.
ರಾಘವೇಂದ್ರ ಪ್ರಭು, ಕವಾ೯ಲು, ಯುವ ಲೇಖಕ