ಉಡುಪಿಯಲ್ಲಿ ಹೀಗೊಂದು ಮಾದರಿ ಕಾಯ೯ ಸಾವ೯ಜನಿಕರ ಮೆಚ್ಚುಗೆ
Thumbnail
ಉಡುಪಿ: -ಹೋಮ್ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ಯಂತ್ರದೊಂದಿಗೆ ಕೆಲಸ ಮಾಡುವ ಸಂದಭ೯ ಒಂದು ಕೈಯನ್ನು ಕಳೆದುಕೊಂಡು ಕಳೆದ 10 ವಷ೯ಗಳಿಂದ ಕಷ್ಟಪಡುತ್ತಿದ್ದ ಪೇತ್ರಿ ನಟರಾಜ ರವರಿಗೆ ಬ್ಯಾಟರಿ ಸೆನ್ಸಾರ್ ಒಪೆರಾಟೆಡ್ ಕೃತಕ ಕೈ ಅಳವಡಿಸಿ ಅವರ ಜೀವನಕ್ಕೆ ಆಧಾರವಾಗುವ ಪ್ರಾಮುಖ್ಯವಾದ ಕಾಯ೯ವನ್ನು ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಸುಮಾರು 2 ಲಕ್ಷ ರೂ ಮೌಲ್ಯದ ಈ ಕೃತಕ ಕೈಜೋಡಣೆಗೆ ಅಜು೯ನ್ ಭಂಡಾರ್ಕಾರ್ ನೇತೃತ್ವದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅದೇ ರೀತಿ ರೋಶನ್ ಬೆಲ್ಮನ್ ನೇತೃತ್ವದ ಹ್ಯುಮಾನಿಟಿ ಟ್ರಸ್ಟ್ ರವರ ಸಹಕಾರದೊಂದಿಗೆ ಅದೇ ರೀತಿ ದಾನಿಗಳ ಸಹಕಾರದಲ್ಲಿ ಈ ಕಾಯ೯ ನೆರವೇರಿದೆ. ಇದರಿಂದ ಈ ಬಡ ಕುಟುಂಬದ ನಟರಾಜ್ ರವರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಸೆ.13ರಂದು ಅವರ ಮನೆಗೆ ತೆರಳಿ ಈ ಕೈ ಜೋಡಣೆ ಕಾಯ೯ಕ್ರಮದಲ್ಲಿ ಡಾII ಶಶಿಕಿರಣ್ ಶೆಟ್ಟಿ, ಡಾ|| ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸುಜಯ ಶೆಟ್ಟಿ, ಅನುಷಾ, ಮುಂತಾದವರಿದ್ದರು Namma Kaup
14 Sep 2020, 09:17 PM
Category: Kaup
Tags: