ದೇಶ ಕಾಯೋ ಯೋಧರಿಗೆ ಮಾಸ್ಕ್ ತಯಾರಿಸಿದ ಇಶಿತಾಗೆ ಉಡುಪಿಯಲ್ಲಿ ಸಮ್ಮಾನ
ಗಡಿ ಕಾಯುವ ಯೋಧರಿಗೆ ಸ್ವತಃ ಮಾಸ್ಕ್ ತಯಾರಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಮೆಚ್ಚುಗೆಯ ಪತ್ರವನ್ನು ಪಡೆದ ವಿದ್ಯಾರ್ಥಿನಿ ಇಶಿತಾ ಆಚಾರ್ ಅವರನ್ನು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಇಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್, ಉಡುಪಿ ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಜೇಸಿಐ ಉಡುಪಿ ಸಿಟಿ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ ಹಾಗೂ ಕಾರ್ಯದರ್ಶಿ ಉದಯ ನಾಯ್ಕ್, ಇಶಿತಾಳ ತಾಯಿ ನಂದಿತಾ ಆಚಾರ್ ಉಪಸ್ಥಿತರಿದ್ದರು.
ಇಶಿತಾ ಆಚಾರ್ ಅವರು ಮಣಿಪಾಲ ಮಾಧವ ಕೃಪಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿ ಗಡಿ ಕಾಯುವ ಯೋಧರಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಛೇರಿಯ ಮೂಲಕ ಕಳುಹಿಸಿದ್ದರು. ಇಶಿತಾ ಆಚಾರ್ ಅವರ ಕಾರ್ಯವನ್ನು ಶ್ಲಾಘಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಯಕ್ತಿಕ ಪತ್ರವನ್ನು ಇಶಿತಾಳ ತಾಯಿ ನಂದಿತಾ ಆಚಾರ್ ಅವರಿಗೆ ಕಳುಹಿಸಿದ್ದರು.
ವರದಿ : ರಾಘವೇಂದ್ರ ಪ್ರಭು ಕರ್ವಾಲು (ನಮ್ಮ ಕಾಪು ನ್ಯೂಸ್)
