ಅಕ್ಟೋಬರ್ 19ರವರೆಗೆ 20% ರಿಯಾಯಿತಿ ದರದಲ್ಲಿ ಮೂಡುಬಿದ್ರಿಯ ತೆನಸ್ ರೆಸ್ಟೋರೆಂಟ್
Thumbnail
ಪಿಜ್ಜಾಪ್ರಿಯರಿಗೆ ಶುಭಸುದ್ದಿ.ಮೂಡಬಿದ್ರೆ ಪರಿಸರದ ಜನತೆ ಇನ್ನುಮುಂದೆ ಸುಪೀರಿಯರ್ ಕ್ವಾಲಿಟಿ ಯ ಪ್ಯಾನ್ ಪಿಜ್ಜಾದ ರುಚಿ ಸವಿಯಲು ದೂರದ ಮಂಗಳೂರಿಗೋ ಇಲ್ಲ ಬೇರಾವುದೋ ಊರಿಗೆ ಹೋಗಬೇಕಾಗಿಲ್ಲ.ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು , ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಒದಗಿಸುವ ಉದ್ದೇಶದೊಂದಿಗೆ ಮೂಡುಬಿದಿರೆ ನಗರದ ಹೃದಯಭಾಗದಲ್ಲಿರುವ ಸಿಟಿ ಪಾಯಿಂಟ್ ಕಾಂಪ್ಲೆಕ್ಸ್(ಬದ್ರಿಯಾ ಜುಮ್ಮಾ ಮಸೀದಿ ಬಳಿ) ನಲ್ಲಿ ನೂತನ ಪಿಜ್ಜಾ ರೆಸ್ಟೋರೆಂಟ್ ‘ತೆನಸ್’ ಶುಭಾರಂಭಗೊಂಡಿದೆ. ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ 100% ಪ್ಯಾನ್ ಪಿಜ್ಜಾ ಒದಗಿಸುವುದು ಮತ್ತು ಪಿಜ್ಜಾ ಡೊ, ಸಾಸ್ ಇತ್ಯಾದಿಗಳನ್ನು ದಿನಂಪ್ರತಿ ತಾಜಾವಾಗಿ ರೆಸ್ಟೋರೆಂಟ್ ನ ಕಿಚನ್ ನಲ್ಲಿಯೇ ತಯಾರಿಸುವುದು ಇಲ್ಲಿನ ವಿಶೇಷ.
ರುಚಿರುಚಿಯಾದ ಪಿಜ್ಜಾದೊಂದಿಗೆ ಬರ್ಗರ್, ಪಾಸ್ತಾ, ಮೊಮೋಸ್, ಐಸ್ ಕ್ರೀಮ್ , ಜ್ಯೂಸ್ ಸೇರಿದಂತೆ ವಿವಿಧ ವೈರೈಟಿಯ ರುಚಿಕರ ಆಹಾರತಿನಿಸುಗಳು ರೆಸ್ಟೋರೆಂಟ್ ನಲ್ಲಿ ಲಭ್ಯವಿದೆ. ಗೆಳೆಯರ ಜೊತೆ ಇಲ್ಲ ಫ್ಯಾಮಿಲಿ ಜೊತೆ ಬಂದು ರೆಸ್ಟೋರೆಂಟ್ ನಲ್ಲೆ ಕುಳಿತು, ಹರಟೆಯೊಡೆಯುತ್ತ ‘ತೆನಸ್’ ನ ಫ್ರೆಶ್ ಅಂಡ್ ಹಾಟ್ ಫುಡ್ ಸವಿಯಬೇಕೆನ್ನುವರಿಗೆ ಆರಾಮದಾಯಕ ಆಸನದ ವ್ಯವಸ್ಥೆಇದೆ ಮಾತ್ರವಲ್ಲ ವಾಹನದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಉದ್ಘಾಟನಾ ಕೊಡುಗೆಯಾಗಿ ಆಹಾರ ತಿನಿಸುಗಳ ಬಿಲ್ ಮೇಲೆ ಅಕ್ಟೋಬರ್ 19 ರವರೆಗೆ ಶೇ.20ರ ನೇರ ರಿಯಾಯಿತಿ ಕೂಡ ಲಭ್ಯ ಎಂಬುದಾಗಿ ರೆಸ್ಟೋರೆಂಟ್ ಮಾಲಕರು ತಿಳಿಸಿದ್ದಾರೆ. ಇನ್ನು, ಮನೆಯಿಂದಲೇ ಆರ್ಡರ್ ಮಾಡುವಿರಾದರೆ 3 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಹೋಂ ಡೆಲಿವಿರಿ ವ್ಯವಸ್ಥೆ ರೆಸ್ಟೋರೆಂಟ್ ಕಡೆಯಿಂದ ದೊರಕುತ್ತದೆ. ‘ತೆನಸ್’ ರುಚಿಕರ, ತಾಜಾ, ವೈರೈಟಿ ತಿನಿಸುಗಳು ಮಾತ್ರವಲ್ಲದೇ ತಮ್ಮ ರೆಸ್ಟೋರೆಂಟ್ ನ ಬೋರ್ಡ್, ಸ್ಟಿಕ್ಕರ್ಸ್, ವಿಸಿಟಿಂಗ್ ಕಾರ್ಡ್ ನಲ್ಲಿ ತುಳುಲಿಪಿ ಬಳಸುವ ಮೂಲಕ ಗಮನಸೆಳೆದಿದೆ.ಈ ಮೂಲಕ ನಾವು ತುಳುವಿನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲಕರು.
Source: News Bhandara/ನ್ಯೂಸ್ ಭಂಡಾರ
Additional image Additional image
30 Sep 2020, 01:36 PM
Category: Kaup
Tags: