ಸ್ವಚ್ಛತೆ ಮನೆಯಿಂದಲೇ ಆರಂಭವಾಗಲಿ - ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ
ಉಡುಪಿ :- ಸ್ವಚ್ಚತೆ ಎಂಬುದು ನಮ್ಮ ಮನೆಯಿಂದ ಪ್ರಾರಂಭವಾಗಬೇಕು.ಪ್ರತಿ ಪ್ರಜೆಯೂ ಸ್ವಯಂಪ್ರೇರಿತನಾಗಿ ತನ್ನ ಸಮಾಜವನ್ನು ಶುಚಿಯಾಗಿಟ್ಟುಕೊಂಡರೆ ಆಗ ಯಾವುದೋ ಸಂಘ ಸಂಸ್ಥೆಗಳು ಸ್ವಚ್ಛಭಾರತ ಅಭಿಯಾನ ಮಾಡುವ ಅಗತ್ಯವೇ ಇಲ್ಲ ಎಂದು ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು.
ಅವರು ಕೆಮ್ಮಣ್ಣು ಸಕಾ೯ರಿ ಪ.ಪೂ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಸ್ವಚ್ಚತಾ ಅಭಿಯಾನ ಮತ್ತು ಗಾಂಧಿ ಜಯಂತಿ ಆಚರಣಿ ಕಾಯ೯ಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ನಾವು ಬದಲಾದರೆ ಮಾತ್ರ ದೇಶ ಬದಲಾಗುವುದು ಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ನಂದಕಿಶೋರ್, ಶಾಲಾ ಪ್ರಾಂಶುಪಾಲರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ತೋನ್ಸೆ ಗ್ರಾ.ಪಂ, ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘ, ನಿಮ೯ಲ ತೋನ್ಸೆ, ಸೌಹಾಧ೯ ಸಮಿತಿ', ಸ್ವಚ್ಚ ಭಾರತ್ ಫ್ರೆಂಡ್ಸ್,ಲಯನ್ಸ್ ರೋಟರಿ ಕ್ಲಬ್, ರಿಕ್ಷಾ ಚಾಲಕರು ಶ್ರೀ.ಕ್ಷೇ.ಧ.ಗ್ರಾ ಯೋಜನೆ,ಪುಟ್ ಬಾಲ್ ಫ್ರೆಂಡ್ಸ್, ಮುಂತಾದವರು ಸಹಕರಿಸಿದರು.
