ಕಳತ್ತೂರು ಚರಣ್ ಕುಲಾಲ್ ಗೆ ಹುಟ್ಟೂರ ಸನ್ಮಾನ
ಕಾಪು :(04/10/2020)ಕುಲಾಲ ಸಮಾಜ (ರಿ) ಕಳತ್ತೂರು ಒಕ್ಕೂಟ ದ ವತಿಯಿಂದ ಊರಿನ ಪ್ರತಿಭಾವಂತ ವಿದ್ಯಾರ್ಥಿ ಚರಣ್ ಈ ಬಾರಿಯ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದು ತನ್ನ ಊರ ಕುಲಾಲ ಸಮಾಜದ ಗಣ್ಯರ ಜೊತೆ ಗೌರವ ಸನ್ಮಾನದ ಕ್ಷಣ.
ಕಳತ್ತೂರು ಮಲಂಗೊಳಿಯ ಚರಣ್ ಕುಲಾಲ್ ಇವರು ಜಗನಾಥ್ ಕುಲಾಲ್ ಹಾಗೂ ಆಶಾ ಕುಲಾಲ್ ದಂಪತಿಗಳ ಸುಪುತ್ರರಾಗಿದ್ದು. ಗ್ರಾಮೀಣ ಮಟ್ಟದಲ್ಲಿನ ನಿಮ್ಮ ಈ ಸಾಧನೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಹೊಸದೊಂದು ಅದ್ಯಾಯ ದಂತೆ ಮಿನುಗುವ ನಕ್ಷತ್ರದಂತೆ ಹೊರ ಹೊಮ್ಮಲಿ.
ಇಂದಿನ ಸುಂದರ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಶ್ರೀ ರಾಜೇಶ್ ಕುಲಾಲ್ ಪೈಯಾರು, ಕಾರ್ಯದರ್ಶಿ ಶಕ್ತಿ ಆರ್ ಕುಲಾಲ್, ಕೋಶಾಧಿಕಾರಿ ಹರೀಶ್ ಕೆ ಮೂಲ್ಯ, ಒಕ್ಕೂಟದ ಪ್ರಮುಖರು ಶ್ರೀ ಸಂಜೀವ ಕುಲಾಲ್,ಶಂಕರ್ ಕುಲಾಲ್ ಇರಂದಾಡಿ, ರಾಗು ಮೂಲ್ಯ ಕುಕ್ಕುಂಜ, ತೊತು ಮೂಲ್ಯ ಪೈಯಾರು, ಸತೀಶ್ ಕುಲಾಲ್ ಮಲಂಗೊಳಿ ಇನ್ನಿತರರು ಉಪಸ್ಥಿತರಿದ್ದರು.
