ಕುಡಿಯುವ ನೀರು ಪೋಲು ಕೇಳುವವರು ಯಾರು ಇಲ್ಲವೇ? ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ
ಹಿರಿಯಡಕ -ಉಡುಪಿ ಮುಖ್ಯ ರಸ್ತೆಯಲ್ಲಿ (ಅಂಜಾರು ಕ್ರಾಸ್) ಸ್ಯಾಬ್ ಒಡೆದು ಕಳೆದ 10 ದಿನದಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿ ಸೇರುತ್ತಿತ್ತು ಸ್ಥಳೀಯರ ಪ್ರಕಾರ ದಿನಕ್ಕೆ ಅಂದಾಜು ಹತ್ತು ಸಾವಿರ ಲೀಟರ್ ನೀರು ಚರಂಡಿಗೆ ಹೋಗುತ್ತಿತ್ತು.ಈ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ನೀರು ಹರಿಯುತ್ತಿರುದರಿಂದ ಕೆಸರು ಉಂಟಾಗಿ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿತ್ತು.
ನಮ್ಮ ಕಾಪು ವೆಬ್ಸೈಟ್ ನಲ್ಲಿ ರಾಘವೇಂದ್ರ ಪ್ರಭು ಕರ್ವಾಲು ಅವರ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿಯವರು ಸ್ಯಾಬ್ ನ್ನು ಅಧಿಕಾರಿಗಳ ಮೂಲಕ ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ತಡೆದಿದ್ದಾರೆ.ಈ ಬಗ್ಗೆ ನಾಗರೀಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಸಮಸ್ಯೆಯ ಬಗ್ಗೆ ಮಾಡಿದ ವರದಿಯನ್ನು ಓದಲು ಇಲ್ಲಿ ಒತ್ತಿರಿ Click Here
