ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆ : ಸರ್ವ ಧರ್ಮ ಪ್ರಾರ್ಥನೆ ; ಶ್ರಮದಾನ
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಮಹಾತ್ಮಾಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ರವರು ಮಾತನಾಡಿ, ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರ ಕೊಡುಗೆ ಅವಿಸ್ಮರಣೀಯ, ಸತ್ಯ ನಿಷ್ಠೆ ಕರ್ತವ್ಯಶೀಲ ಗುಣ ಹಾಗೂ ದೇಶಕ್ಕಾಗಿ ಅಪ್ರತಿಮ ಧೈರ್ಯ ಸಾಹಸ ಪ್ರವೃತ್ತಿ ತೋರಿಸಿದ ಶಾಸ್ತ್ರೀಯವರು ನಮಗೆಲ್ಲ ಆದರ್ಶಪ್ರಾಯರು ಎಂಬ ಸಂದೇಶವನ್ನು ನೀಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್, ಶಿಕ್ಷಕರಾದ ಉದಯ ಕುಮಾರ್, ಸುರಥ್ ಕುಮಾರ್, ಪ್ರಭಾಕರ್ ಶೆಟ್ಟಿ, ಶಿಕ್ಷಕಿಯರಾದ ಅನುಪಮ, ವೀಣಾ ನಾಯಕ್, ವಾಣಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ, ಸ್ಕೌಟ್, ಗೈಡ್ಸ್, ಎನ್.ಸಿ.ಸಿ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಪರಿಸರವನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.
