ಪೋಲೀಸರ ಕರೆಗೆ ಸ್ಪಂದಿಸಿ ಹದ್ದನ್ನು ರಕ್ಷಿಸಿದ ಶಿವಾನಂದ ಮುನ್ನ ಕಾಪು
Thumbnail
ಕಾಪುವಿನ ಜನರ ಕಷ್ಟಕ್ಕೆ ಮಿಡಿಯುವ ಸಂಘಟನೆ ಅಂತ ಇದ್ರೆ ಅದು ತುಳುನಾಡ ಹಿಂದೂ ಸೇನೆ. ಈಗಾಗಲೇ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅನೇಕ ಮೂಕ ಪ್ರಾಣಿಗಳ ಶೂಸ್ರುಸೆ ಮಾಡಿರುವ ಶಿವಾನಂದ ಪೂಜಾರಿ (ಮುನ್ನ) ತುಳುನಾಡ ಹಿಂದೂ ಸೇನೆಯ ಕಾರ್ಯಕರ್ತರಾಗಿದ್ದು. ಇತ್ತೀಚಿನ ಕೆಲವು ದಿನಗಳ ಹಿಂದೆ ಜನವಸತಿ ಇರುವ ಪ್ರದೇಶದಲ್ಲಿ ಒಂದೆರಡು ಹೆಬ್ಬಾವುಗಳನ್ನು ಹಿಡಿದು ಕಾಪುವಿನಲ್ಲಿ ಬಾರಿ ಸುದ್ದಿಯಾಗಿದ್ದರು. ಇಂದು ಬೆಳಿಗ್ಗೆ ಹೈವೇ ಪ್ಯಾಟ್ರೋಲ್ ಎ.ಎಸ್.ಐ ರಾಜೇಂದ್ರ ಮನಿಯಾನಿಯವರು ಹದ್ದುವೊಂದು ಗಾಯಳುವಾಗಿ ಬಿದ್ದಿದ್ದನ್ನು ಕಂಡು ಶಿವಾನಂದ್ (ಮುನ್ನ) ಇವರಿಗೆ ಪೋನಾಯಿಸಿದರು. ರಾಜೇಂದ್ರ ಮನಿಯಾನಿಯವರ ಕರೆಗೆ ಸ್ಪಂದಿಸಿದ ಶಿವಾನಂದ್ ಮುನ್ನ ತಕ್ಷಣ ಸ್ಥಳಕ್ಕೆ ಧಾವಿಸಿ ಹದ್ದಿಗೆ ಪ್ರಥಮ ಚಿಕಿತ್ಸೆ ನೀಡಿದರು ಮತ್ತು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.
15 Oct 2020, 03:07 PM
Category: Kaup
Tags: