ಸಿಡಿಲು ಬಡಿದು ಮನೆಗೆ ಹಾನಿ : ಕಾಂತಾವರ ಕುಲಾಲ ಸಂಘ ನೆರವು
ಕಾರ್ಕಳ : ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಕಂಬಳಗುಡ್ಡೆ ಜಲಜ ಮೂಲ್ಯ ಇವರ ಮನೆಗೆ ಮಂಗಳವಾರ ಸಂಜೆ 6.30 ರ ಸುಮಾರಿಗೆ ಸಿಡಿಲು ಬಡಿದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಕಳಚಿ ಹೋಗಿದ್ದು ಗೋಡೆಗಳು ಕುಸಿದಿದೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಪ್ರಭಾಕರ್ ಕುಲಾಲ್ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರ ಸೂಚನೆ ಮೇರೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಲೆಕ್ಕಾಧಿಕಾರಿಯವರು ಭೇಟಿ ನೀಡಿ ಪರಿಹಾರಕ್ಕೆ ಕ್ರಮ ಕೈಗೊಂಡಿರುತ್ತಾರೆ.
ಇದರ ಮಧ್ಯೆ ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬದ ಮನೆಗೆ ಭೇಟಿ ನೀಡಿದ ಕಾಂತಾವರ ಕುಲಾಲ ಸಂಘದ ಅಧ್ಯಕ್ಷರಾದ ವಿಠಲ್ ಮೂಲ್ಯ ಮತ್ತು ಪದಾಧಿಕಾರಿಗಳು ಶೀಘ್ರವೇ ವಿದ್ಯುತ್ ಸಂಪರ್ಕ ಶಾಶ್ವತ ಸರಿಪಡಿಸಲು ಸಹಕಾರ ನೀಡಿ ಸುಮಾರು 15000 ರುಪಾಯಿ ವೆಚ್ಚದಲ್ಲಿ ಹೊಸ ವೈರಿಂಗ್ ಹೊಸ ಮೀಟರ್ ಹಾಗೆಯೇ ಎಲ್ಲಾ ಸ್ವಿಚ್ ಬೋರ್ಡ್ ಅಳವಡಿಸಿ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ.
