ಡಿಸೆಂಬರ್ ನಲ್ಲಿ ಕಾಪು ಬೀಚ್ ಉತ್ಸವ : ಪೂರ್ವಭಾವಿ ಸಭೆ
Thumbnail
ಕಾಪು : ಇಲ್ಲಿನ ಮಂಡಲ ಬಿಜೆಪಿ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಸಲುವಾಗಿ "ಅಟಲೋತ್ಸವ - ಕಾಪು ಬೀಚ್ ಉತ್ಸವ" ಡಿಸೆಂಬರ್ 26-27-28 ರಂದು ಕಾಪು ಬೀಚ್‌ನಲ್ಲಿ ನಡೆಯಲ್ಲಿದೆ. ಇದರ ಪೂರ್ವಭಾವಿ ಸಭೆಯು ಗುರುವಾರ ಕಾಪು ಶಾಸಕರ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಹಾಗೂ ರಾಜ್ಯ ಮತ್ತು ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು, ಪುರಸಭೆಯ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
30 Oct 2025, 07:33 PM
Category: Kaup
Tags: