ಕಾಪು ಬೀಚ್ ನಲ್ಲಿ ಯುವಕರಿಬ್ಬರು ನೀರು ಪಾಲು
Thumbnail
ಕಾಪು, ಅ. 18 : ಬೆಂಗಳೂರಿನ ಯುವಕರಿಬ್ಬರು ರವಿವಾರ ಸಂಜೆ ಕಾಪು ಬೀಚ್ ನಲ್ಲಿ ನೀರು ಪಾಲಾಗಿದ್ದಾರೆ.
ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ. ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ‌.
ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಯೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದರು. ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದನು. ನೀರಿನಲ್ಲಿ ಮುಳುಗಿದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
Additional image
18 Oct 2020, 11:53 PM
Category: Kaup
Tags: