ಡಿ.25 (ನಾಳೆ) : ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಜ್ಞಾನ ದೀವಿಗೆ - 2025
Thumbnail

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.)ವತಿಯಿಂದ 5ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಸಮಾರಂಭ
"ಜ್ಞಾನ ದೀವಿಗೆ - 2025" ಡಿ.25, ಗುರುವಾರ ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಇಲ್ಲಿ ಮಧ್ಯಾಹ್ನ 2.30 ರಿಂದ ಜರಗಲಿದೆ.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮೂಲ್ಕಿ ಇದರ ಅಧ್ಯಕ್ಷರಾದ ಸೂರ್ಯಕಾಂತ್ ಜೆ.ಸುವರ್ಣ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. 
ಜೇಸಿಐ ಭಾರತ ರಾಷ್ಟ್ರೀಯ ತರಬೇತಿದಾರ ದೀಪಕ್ ರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಕಪ್ಪ ಅಮಿನ್ ವಕೀಲರು, ಕಾನೂನು ಸಲಹೆಗಾರರು ಮತ್ತು ಬಿರುವೆರ್ ಕಾಪು ಸೇವಾ ಸಮಿತಿ (ರಿ),  ವಿಕ್ರಂ ಕಾಪು ಅಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಮತ್ತು ಅಧ್ಯಕ್ಷರು ಕಾಪು ನಗರ ಯೋಜನಾ ಪ್ರಾಧಿಕಾರ, ಗೀತಾಂಜಲಿ ಸುವರ್ಣ ಕಟಪಾಡಿ ಮಾಜಿ ಸದಸ್ಯರು ಜಿಲ್ಲಾ ಪಂಚಾಯತ್,  ಪ್ರಭಾಕರ ಎಸ್.ಪೂಜಾರಿ ಕಾಪು ಗೌರವಾಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು, ಸಂಜೀವ ಪೂಜಾರಿ ಮೂಳೂರು, ಪ್ರಭಾಕರ ಪೂಜಾರಿ ಉದ್ಯಮಿ, ಬಿಂದಾಸ್ ಕಾಪು, ಕೈಪುಂಜಾಲ್ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಭಾಕರ ಎಸ್.ಪೂಜಾರಿ,  ವಿಕ್ರಂ ಕಾಪು, ಸೂರ್ಯಕಾಂತ್ ಜೆ. ಸುವರ್ಣ, ಶಿವಾನಂದ ಕೋಟ್ಯಾನ್ ಕಟಪಾಡಿ, ನವೀನ್ ಅಮಿನ್ ಕಂಕರಪುರ, ಸಂಜೀವ ಪೂಜಾರಿ ಮೂಳೂರು,  ಸುಧಾಕರ ಸಾಲ್ಯಾನ್, ವಿಕ್ಕಿ ಮಡುಂಬು,  ರಾಘು ಸಿ.ಪೂಜಾರಿ ಮರ್ನಾಡ್ ಸನ್ಮಾನಿಸಲ್ಪಡಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಉಪಾಧ್ಯಕ್ಷರಾದ  ಮನೋಜ್ ಎಸ್. ಅಂಚನ್ ಕಾಪು ವಹಿಸಲಿದ್ದಾರೆ ಎಂದು ಬಿರುವೆರ್ ಕಾಪು ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

24 Dec 2025, 09:56 PM
Category: Kaup
Tags: