ಉಡುಪಿ : ವಿದ್ಯಾಲತಾ ಶೆಟ್ಟಿ ಅಭಿಮಾನಿ ಬಳಗ, ಉಡುಪಿ ಇವರ ಆಶ್ರಯದಲ್ಲಿ ಉದ್ಘಾಟನೆಯ ಪ್ರಯುಕ್ತ ಮೆಹೆಂದಿ ಸ್ಪರ್ಧೆ
ಡಿಸೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ನಮಿತಾ ನಿವಾಸ, ಅಬಕಾರಿ ಭವನ ಎದುರು, ನಾಯರ್ ಕೆರೆ ರೋಡ್, ಉಡುಪಿ ಇಲ್ಲಿ ಜರಗಲಿದೆ.
ಪ್ರಥಮ ಬಹುಮಾನವಾಗಿ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು, ದ್ವಿತೀಯ ಬಹುಮಾನ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು, ತೃತೀಯ ಬಹುಮಾನ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು ಇರಲಿದೆ. ಜೊತೆಗೆ ಆಕರ್ಷಕ ಬಹುಮಾನಗಳು ಹಾಗೂ
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವ ಮಹಿಳೆಯರಿಗೆ ಸೀರೆಯ ನಿಖರ ಬೆಲೆ ಹೇಳುವ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿವೆ.
ಸಮರೋಪ ಸಮಾರಂಭದಲ್ಲಿ ಉಡುಪಿಯ 5 ಮಹಿಳಾ ಚಂಡೆ ತಂಡಗಳನ್ನು ಗೌರವಿಸಲಾಗುವುದು. ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಬೇಕೆಂದು ಸಂಚಾಲಕರು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿದ್ಯಾಲತಾ ಶೆಟ್ಟಿ ಬನ್ನಂಜೆ ಅಭಿಮಾನಿ ಬಳಗ, ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
8105501903, 9148533269,
8050695853, 9591272479
