ಉಡುಪಿ : ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗ ಉದ್ಘಾಟನೆ ಪ್ರಯುಕ್ತ ಡಿ.25ರಂದು ಮಹಿಳೆಯರಿಗಾಗಿ ಮಹೆಂದಿ ಸ್ಪರ್ಧೆ, ವಿವಿಧ ಸ್ಪರ್ಧೆಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಉಡುಪಿಯ ಬ್ರಹ್ಮಗಿರಿಯಲ್ಲಿರುವ ನಮಿತಾ ನಿವಾಸ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ನಲ್ಲಿರುವ ಸಭಾಭವನದಲ್ಲಿ ಜರುಗಿತು.
ಈ ಭವ್ಯ ಸಭಾ ಕಾರ್ಯಕ್ರಮದಲ್ಲಿ ದೊಡ್ಡನ ಗುಡ್ಡೆಯ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ರಮಾನಂದ ಗುರೂಜಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜಕೀಯ ಮುಖಂಡ, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಹೊಲಿಗೆ ಯಂತ್ರದ ಫಲಾನುಭವಿಯಾದ ಸುಜಾತರವರಿಗೆ ಹಸ್ತಾಂತರ ಮಾಡಿ, ಪ್ರತಿಯೊಬ್ಬ ಮಹಿಳೆಯರು ಪ್ರಮುಖ ವಾಹಿನಿಯಲ್ಲಿ ತನ್ನ ಪ್ರತಿಭೆಯ ಛಾಪನ್ನು ಮೂಡಿಸಿಕೊಳ್ಳುವ ಬಗ್ಗೆ ತಿಳಿಸಿದರು.
ದೊಡ್ಡನ ಗುಡ್ಡೆಯ ಎ ವಿ ಬಾಳಿಗ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿರುವ ಸೌಜನ್ಯ ಶೆಟ್ಟಿ ಅವರು ಮಾತನಾಡಿ, ಮಹಿಳೆಯರಿಗೆ ಬೇಕಾಗುವ ಆರೋಗ್ಯ ಮಾಹಿತಿಗಳನ್ನು ನೀಡಿ ಶುಭ ಹಾರೈಸಿದರು.
ಮಹಿಳಾ ಉದ್ಯಮಿ ರಾಜಕೀಯ ಮುಖಂಡರಾದ ಮಮತಾ ಶೆಟ್ಟಿ, ಬಿಜೆಪಿ ಮಹಿಳಾ ಮುಖಂಡರು, ಸಮಾಜ ಸೇವಕರಾದ ವೀಣಾ ಶೆಟ್ಟಿ, ಮಾಜಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದ ಸ್ಥಾಪಕರಾದ ವಿನೋದ್ ಶೆಟ್ಟಿ, ಅಧ್ಯಕ್ಷರಾದ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ರಾಜಕೀಯ ಮುಖಂಡ, ಉದ್ಯಮಿಗಳಾದ ಹರಿ ಪ್ರಸಾದ್ ರೈ ಹಾಗೂ ಪ್ರಮುಖ ಅತಿಥಿಗಳು ಉಪಸ್ಥಿತಿಯಿದ್ದರು.
ಉಡುಪಿಯ 5 ಮಹಿಳಾ ಚಂಡೆ ಬಳಗದ ಎಲ್ಲಾ ಸದಸ್ಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದ ಸ್ಥಾಪಕರಾದ ವಿನೋದ್ ಶೆಟ್ಟಿ ಸ್ವಾಗತಿಸಿದರು.
ದಯಾನಂದ್ ರವರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರೀತಿ ಕಲ್ಯಾಣಪುರ ವಂದಿಸಿದರು.
