ಯೇಸು ಕ್ರಿಸ್ತರ ಜನನ ಮಾನವ ಕುಲಕ್ಕೆ ಶಾಂತಿ,ಪ್ರೀತಿ ಸಹೋದರತ್ವ ನೀಡಿದೆ : ವಿನಯ್ ಕುಮಾರ್‌ ಸೊರಕೆ
Thumbnail

ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾಜಿ ಸಚಿವ ಹಾಗೂ ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಕಾಪು ರಾಜೀವಭವನದಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಣೆ ನಡೆಯಿತು. 

ಈ ಸಂದರ್ಭದಲ್ಲಿ ಡಾ. ಸಹನಾ ಪ್ರವೀಣ್ ಮತ್ತು ತಂಡದಿಂದ ಕ್ರಿಸ್ಮಸ್ ಕ್ಯಾರಲ್ಸ್ ಹಾಡಲಾಯಿತು. 

ಸಾಂತಾಕ್ಲಾಸ್ ಆಗಮನದೊಂದಿಗೆ  ಎಲ್ಲರಲ್ಲಿ  ವಿಶೇಷ ಸಂಭ್ರಮ ಮೂಡಿದ್ದು, ಕೇಕ್ ಕತ್ತರಿಸಿ ಸಿಹಿ ಹಂಚುವ  ಮೂಲಕ ಕ್ರಿಸ್ಮಸ್ ಹಬ್ಬವನ್ನು ಸೌಹಾರ್ದದಿಂದ ಆಚರಿಸಲಾಯಿತು ಅನಂತರ ಅನಂತರ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ, ಯೇಸು ಕ್ರಿಸ್ತರ ಜನನವು ಮಾನವಕುಲಕ್ಕೆ ಶಾಂತಿ, ಪ್ರೀತಿ, ಸಹೋದರತ್ವ ಮತ್ತು ತ್ಯಾಗದ ಮಹತ್ವದ ಸಂದೇಶವನ್ನು ನೀಡಿದೆ ಎಂದು ಹೇಳಿದರು. ಸಮಾಜದಲ್ಲಿ ದ್ವೇಷ, ಅಸಹಿಷ್ಣುತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕ್ರಿಸ್ತನ ಬೋಧನೆಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ. ಎಲ್ಲ ಧರ್ಮಗಳ ಸಾರ ಮಾನವೀಯತೆಯೇ ಆಗಿದ್ದು, ಪರಸ್ಪರ ಗೌರವ ಮತ್ತು ಸೌಹಾರ್ದದಿಂದ ಬದುಕುವುದೇ ನಿಜವಾದ ಹಬ್ಬದ ಆಚರಣೆ ಎಂದು ಅವರು ತಿಳಿಸಿದರು. ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ ಹಾಗೂ ಸಹಬಾಳ್ವೆಯನ್ನು ಬಲಪಡಿಸುತ್ತವೆ ಎಂದು ಹೇಳಿ, ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಮುಖ್ಯ ಸಂದೇಶಕರಾಗಿ ಆಗಮಿಸಿ್ ಆಲ್ವಿನ್ ದಾಂತಿ ರವರು ಮಾತನಾಡಿ ಯೇಸು ಕ್ರಿಸ್ತರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುರು ಸಾರಿದ ಪ್ರೀತಿ, ಸಮಾನತೆ, ಶಾಂತಿ, ತ್ಯಾಗ ಮತ್ತು ಮಾನವೀಯತೆಯ ಸಂದೇಶಗಳು ಇಡೀ ಮಾನವಕುಲಕ್ಕೆ ಮಾರ್ಗದರ್ಶಕವಾಗಿವೆ. ಸಮಾಜದಲ್ಲಿ ಜಾತಿ, ಧರ್ಮ, ವರ್ಗಭೇದಗಳ ಕಾರಣದಿಂದ ಅಸಮಾನತೆ ಮತ್ತು ದ್ವೇಷ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, “ಎಲ್ಲರೂ ಒಂದೇ ಮಾನವಕುಲ” ಎಂಬ ನಾರಾಯಣ ಗುರುರವರ ಸಂದೇಶ ಹಾಗೂ ಯೇಸು ಕ್ರಿಸ್ತರ ಸಹೋದರತ್ವ, ಕ್ಷಮೆ ಮತ್ತು ಸೇವೆಯ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ದುರ್ಬಲರು, ದೀನರು ಮತ್ತು ಹಿಂದುಳಿದವರನ್ನು ಗೌರವದಿಂದ ಕಾಣುವುದು, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುವುದು ನಿಜವಾದ ಧರ್ಮದ ಅರ್ಥವಾಗಿದೆ. ಈ ಮಹಾನ್ ಚಿಂತಕರ ಆದರ್ಶಗಳನ್ನು ಅನುಸರಿಸಿದಾಗ ಮಾತ್ರ ಶಾಂತಿಯುತ, ಸಮಾನತೆಯ ಮತ್ತು ಸೌಹಾರ್ದತೆಯ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಅವರು ಹೇಳಿದರು.ಇಂತಹ ಹಬ್ಬಗಳ ಆಚರಣೆ ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ  ಕರ್ನಾಟಕ ಕ್ರೈಸ್ತ ನಿಗಮ ಮಂಡಳಿಯ ನಿರ್ದೇಶಕರಾದ ಪ್ರಶಾಂತ್ ಜತ್ತನ್ನರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕರಾವಳಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷರಾದ ಎಂ.ಎ ಗಫೂರ್ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವೈ ಸುಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ,, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್, ಕಾಪು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅಡ್ವೆ  ಕಾಪು ದಿವಾಕರ್ ಶೆಟ್ಟಿ, ನವೀನ್ ಎನ್ ಶೆಟ್ಟಿ, ಉಡುಪಿ ಜಿಲ್ಲಾ ಯುವಕಾಂಗ್ರೆಸ್ ನ ಮುಖಂಡರಾದ ಅರ್ಜುನ್ ನಾಯರಿ, ಮೊಹಮ್ಮದ್ ನಿಯಾಜ, ಗೌರೀಶ್ ಕೋಟ್ಯಾನ್ ಹಿರಿಯ ಕಾಂಗ್ರೆಸ್ ಮುಖಂಡರು  ಗೋಪಾಲ ಪೂಜಾರಿ ಪಲಿಮಾರು ಹಸನಬ್ಬ ಶೇಖ್, ರಿಯಾಜ್ ಮುದರಂಗಡಿಕಾಂಗ್ರೆಸ್ ಪಕ್ಷದ ಮುಖಂಡರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ಪಕ್ಷದ ಪದಾಧಿಕಾರಿಗಳು ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸೌಹಾರ್ದತೆ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಈ ಕ್ರಿಸ್ಮಸ್ ಆಚರಣೆ ಸಾರಿತು. ಅಶ್ವಿನಿ ನವೀನ್ ಬಂಗೇರರವರು ಸ್ವಾಗತಿಸಿ, ತಸ್ನೀನ್ ಅರಾರವರು ಕಾರ್ಯಕ್ರಮ ನಿರೂಪಿಸಿದರು.

27 Dec 2025, 05:43 PM
Category: Kaup
Tags: