ಅರಸು ಪ್ರಶಸ್ತಿ -2025 ಪುರಸ್ಕೃತರಾದ ಲಚ್ಚಿಲ್ ನಾಗೇಶ್ ಬಂಗೇರ ಉಚ್ಚಿಲ
Thumbnail

ಪಡುಬಿದ್ರಿ : ಲಚ್ಚಿಲ್ ನಾಗೇಶ್ ಡಿ. ಬಂಗೇರ ಉಚ್ಚಿಲ ಅವರನ್ನು ಮೂಲ್ಕಿ ಸೀಮೆ ಅರಸರ ಅರಮನೆಯಲ್ಲಿ "ಅರಸು ಪ್ರಶಸ್ತಿ -2025"ನ್ನು ಪ್ರಧಾನಿಸಿ ಗೌರವಿಸಲಾಯಿತು.

ಬ್ಯಾಂಕ್ ಆಫ್ ಇಂಡಿಯಾ ಎಂಪ್ಲಾಯಸ್೯ ಯೂನಿಯನ್ ಇದರ ಕರ್ನಾಟಕ ವಲಯದ ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆ, ಲಚ್ಚಿಲ್ ವಿದ್ಯಾಪ್ರಸಾರ ಸಮಿತಿಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭ ಅರಸು ದುಗ್ಗಣ್ಣ ಸಾವಂತರು, ಮಾಜಿ ಸಚಿವ ಅಭಯಚಂದ್ರ ಜೈನ್, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಡಾ. ಅಮರಶ್ರೀ ಶೆಟ್ಟಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಲೀಲಾಕ್ಷ ಕರ್ಕೇರ, ಬಾಹುಬಲಿ ಪ್ರಸಾದ್, ಗೌತಮ್ ಜೈನ್, ವಸಂತ್ ಬೆರ್ನಾರ್ಡ್, ಉದ್ಯಮಿ ಕನ್ಯಾನ ಸದಾಶಿವ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

29 Dec 2025, 10:31 PM
Category: Kaup
Tags: