ಕಾಪು : ಅಟಲ್ ಬಿಹಾರಿ ವಾಜಪೇಯಿ ಸರಳ ಸಜ್ಜನ ವ್ಯಕ್ತಿಯಾಗಿ ಬಾಳಿದವರು. ಓರ್ವ ಕಾರ್ಯಕರ್ತನೂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದು ಬಿಜೆಪಿ ಪಕ್ಷದಲ್ಲಿದೆ. ಆದರೆ ಉಳಿದ ಪಕ್ಷಗಳಲ್ಲಿ ಈ ಕ್ರಮವಿಲ್ಲ. ಮೋಸ ಹೇಗೆ ಮಾಡುವುದನ್ನು ಕಾಂಗ್ರೆಸ್ ನಿಂದ ಕಲಿಯಬೇಕು. 5 ಸಾವಿರ ಕೋಟಿ ಗೃಹಲಕ್ಷ್ಮಿ ಹಣವನ್ನು ಜನರಿಗೆ ಮೋಸ ಮಾಡಲು ನಾವು ಬಿಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಅವರು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾಪು ಕಡಲ ಪರ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ತ ಸರಕಾರ ಕರ್ನಾಟಕದಲ್ಲಿದೆ. ಕರಾವಳಿ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. 4 ದಿನದ ಚರ್ಚೆ ವ್ಯರ್ಥವಾಗಿದೆ. 4 ಲಕ್ಷ ಕೋಟಿ ಸಾಲದ ಸರಕಾರ ಸಿದ್ದರಾಮಯ್ಯ ಸರಕಾರದ ಸಾಲ. ಸಾಲನೂ ಜನತೆಗೆ ಫ್ರೀ ಭಾಗ್ಯ ಎಂದರು.
ಈ ಸಂದರ್ಭ ಕುದಿ ಶ್ರೀನಿವಾಸ ಭಟ್, ಡಾ.ದೇವದಾಸ, ದೀಕ್ಷಾ ವಿ, ತನುಶ್ರೀ ಪಿತ್ರೋಡಿ, ಡಾ.ಚಂದ್ರಶೇಖರ್, ಡಾ.ನವೀನ್, ಡಾ.ಶಿಲ್ಪ, ಕೃಷ್ಣ ಶೆಟ್ಟಿ, ಉಮಾ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಧೀಮಂತ ರಾಜಕಾರಣಿ ವಾಜಪೇಯಿ ಅಜಾತ ಶತ್ರುವಾಗಿದ್ದರು ಎಂದರು.
ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ವಿ. ಸುನಿಲ್ ಕುಮಾರ್, ಕಿರಣ್ ಕೊಡ್ಗಿ, ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಸಂದೀಪ್ ರವಿ, ದಿನಕರ ಬಾಬು, ನಿತಿನ್, ರೇಷ್ಮಾ ಶೆಟ್ಟಿ, ಶ್ರೀಕಾಂತ್ ನಾಯಕ್, ಸಂಧ್ಯಾ ರಮೇಶ್, ಶ್ಯಾಮಲಾ ಕುಂದರ್, ಕುತ್ಯಾರು ನವೀನ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಸಂತೋಷ್ ಮೂಡುಬೆಳ್ಳೆ, ಸೋನು ಪಾಂಗಾಳ, ನೀತಾ ಗುರುರಾಜ್, ಪಾರ್ಥಸಾರಥಿ, ಕೃಷ್ಣ ರಾವ್, ಗಾಯತ್ರಿ ಪ್ರಭು ಭಾಗವಹಿಸಿದ್ದರು.
ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸಂತೋಷ್ ನಂಬಿಯಾರ್ ನಿರೂಪಿಸಿದರು.
