ಪಡುಬಿದ್ರಿ : ಇಂದಿನ ಯುವ ಜನತೆಗೆ ಸಂಸ್ಕಾರ ನೀಡುವಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಮೋಸ ವಂಚನೆಗಳು ಜಾಸ್ತಿಯಾಗಿ ಯುವ ಜನತೆ ಬಲಿಯಾಗುತೀರುವುದು ಖೇದಕರ. ಆಧುನಿಕ ಜೀವನ ಶೈಲಿಯ ಒತ್ತಡ ನಿವಾರಣೆಗೆ ಭಗವದ್ಗೀತೆಯೇ ಪರಿಹಾರ. ಕ್ಷೇತ್ರದ ವತಿಯಿಂದ ಭಗವದ್ಗೀತೆಯನ್ನು ಭಕ್ತಾದಿಗಳಿಗೆ ಹಂಚಿರುವುದು ಶ್ಲಾಘನೀಯ ಎಂದು ಕೇಮಾರು ಶ್ರೀ ಶೀ ಈಶಾ ವಿಠಲದಾಸ ಸ್ವಾಮೀಜಿ ಹೇಳಿದರು
ಅವರು ಪಡುಬಿದ್ರಿ ಅಲಂಗಾರು ಕ್ಷೇತ್ರದ ಶ್ರೀ ಆದಿಶಕ್ತಿ ಅದಿಮಾಯೆ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶನಿಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿ ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮವನ್ನು ಕೇವಲ ಆಚರಣೆಗಳಲ್ಲ. ಅವು ಜೀವನವನ್ನು ಅರ್ಥ ಪೂರ್ಣ ಗೂಳಿಸುವ ಸಾಧನಗಳು ಅವು ನಮ್ಮ ಅಂತರಿಕ ಶಕ್ತಿಯನ್ನು ಹೆಚ್ಚಿಸಿ, ಸಮಾಜವನ್ನು ಒಗ್ಗೂಡಿಸಿ ನಮ್ಮ ಸಂಸ್ಕ್ರತಿಯನ್ನು ಬೆಳಗಿಸುತ್ತವೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮಗಳ ಮಹತ್ವವನ್ನು ಅರಿತು ಅವುಗಳನ್ನು ಗೌರವಿಸಿ, ಸಕಾರಾತ್ಮಕವಾಗಿ ಅಚರಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಧರ್ಮದರ್ಶಿ ಸುಧಾಕರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ರಾಕೇಶ್ ಶೆಟ್ಟಿಗಾರ್ ರವರಿಗೆ ವ್ಯೆದ್ಯಕೀಯ ಸಹಾಯಹಸ್ತ ನೀಡಲಾಯಿತು.
ಕ್ಷೇತ್ರದ ವತಿಯಿಂದ ಭಕ್ತಾದಿಗಳಿಗೆ ಭಗವದ್ಗೀತೆಯನ್ನು ಹಂಚಲಾಯಿತು.
ಸಮಾಜ ಸೇವಕಿ ಗೀತಾ ಅರುಣ್, ರಂಗಭೂಮಿ ಹಾಗೂ ಸಮಾಜ ಸೇವಕಿ ಯಶೋಧ ಪಡುಬಿದ್ರಿ ಹಾಗೂ ಕನ್ನಡ ಚಲನಚಿತ್ರ ಕಲಾವಿದೆ ಐಶ್ವರ್ಯ ಆಚಾರ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಲ್ಲವಿ ಬಾರ್ ರೆಸ್ಟೋರೆಂಟ್ ಮಾಲಕ ಸಂತೋಷ್ ಕುಮಾರ್ ಶೆಟ್ಟಿ , ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪಡುಬಿದ್ರಿ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಓಂಕಾರ ಕಾಸ್ಟೋಮ್ಸ್ & ಕಲಾ ಸಂಗಮದ ಅಡಳಿತ ನಿರ್ದೇಶಕಿ ಗೀತಾ ಅರುಣ್, ನಮ್ಮ ಕುಡ್ಲ ಚಾನಲ್ ನಿರೂಪಕಿ ಡಾ. ಪ್ರಿಯ ಹರೀಶ್ ಶೆಟ್ಟಿ, ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಕನ್ನಡ ಚಲನಚಿತ್ರ ನಟಿ ಐಶ್ವರ್ಯ, ಕಾಪು ವಲಯ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಲ್ಲಾರು ಉಪಸ್ಥಿತರಿದ್ದರು.
ಸಂತೋಷ್ ಪಡುಬಿದ್ರಿ ಸ್ವಾಗತಿಸಿ ವಂದಿಸಿದರು , ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.
