ಧರ್ಮ ಒಂದೇ ಅದುವೆ ವಿಶ್ವ ಮಾನವ ಧರ್ಮ : ಡಾ ಸುರೇಶ ನೆಗಳಗುಳಿ
Thumbnail

ಪಡುಬಿದ್ರಿ : ಕುವೆಂಪು ಜನ್ಮ ದಿನದ ನೆನಪಿನಲ್ಲಿ ಓ ನನ್ನ ಚೇತನಾ ವಿಚಾರಗೋಷ್ಠಿ,  ಕವಿಗೋಷ್ಠಿಯು ಭಾನುವಾರ ಪಡುಬಿದ್ರಿಯ ಸುಝ್ಲಾನ್ ಕಾಲೋನಿಯ ಸಭಾಭವನದಲ್ಲಿ  ನಡೆಯಿತು.
ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ನಡೆದ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ಉದ್ಘಾಟಿಸಿ, ಕುವೆಂಪು ಅವರ ಬಗ್ಗೆ ಮಾತನಾಡಿ ವಿಶ್ವ ಮಾನವಧರ್ಮಕ್ಕೆ ಮಿಗಿಲಾದ ಧರ್ಮ ಬೇರೆ ಇಲ್ಲ ಎನ್ನುತ್ತಾ ಸ್ವರಚಿತ ಕವನಗಳನ್ನು ವಾಚಿಸಿದರು.

ರಾಣಿ ಪುಷ್ಪಲತಾ ದೇವಿಯವರು ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ ಚಿಂತಕ ರಂಜನ್ ಕುಮಾರ್,
ಶಿಕ್ಷಕಿ ಕವಯಿತ್ರಿ ಶರಣ್ಯ ಬೆಳುವಾಯಿ, NSCDF ಅಧ್ಯಕ್ಷ ಗಂಗಾಧರ ಗಾಂಧೀ, ಮತ್ತು NSCDF ಅಂತಾರಾಷ್ಟ್ರೀಯ ವಕ್ತಾರ ಕೆ.ಎಂ.ಇಲಿಯಾಸ್ ಮುಖ್ಯ ಅತಿಥಿಗಳಾಗಿದ್ದರು.

ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಕವಯಿತ್ರಿ ಜ್ಯೋತಿ ಮಹದೇವ್  ವಹಿಸಿದ್ದರು.

ಕವಿಗಳಾದ ಅಶ್ವಿನಿ ಕೊಂಜಾಡಿ, ,ವಾಣಿಶ್ರೀ ಅಶೋಕ್ ಐತಾಳ್, ಕೆ ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ,ಆಂಟೋನಿ ಲೂಯಿಸ್ ಮಣಿಪಾಲ, ಮಾರುತಿ ಕೆ.ಪಿ.,ಮಾಲತಿ ರಮೇಶ್ ಕೆಮ್ಮಣ್ಣು, ಅವನೀಶ್ ಐತಾಳ್, ಪಿ. ಆಯಿಷಾ ಪೆರ್ನೆ,ವಿನೋದಾ ಪ್ರಕಾಶ್ ಪಡುಬಿದ್ರಿ,ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ,ಸುಲೋಚನ ನವೀನ್, ತನೀರಾ,ಆತೂರ್ ಸುಮಯ್ಯಾ, ಎಂ ಪಾಟೀಲ್ ದೇರಳಕಟ್ಟೆ,ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ,ಪೂರ್ಣಿಮಾ ಅನಿಲ್‌ ಮಣಿಪಾಲ,ಸ್ಮಿತಾ ಅಶೋಕ್ ಪರ್ಕಳ, ಮಂಡ್ಯ ಅನಾರ್ಕಲಿ ಸಲೀಂ  ಮಂಗಳೂರು, ಗಂಗಾಧರ ಗಾಂಧಿ ಮತ್ತಿತರರು ಕಾವ್ಯವಾಚನ ಮಾಡಿದರು. ಭಾಗವಹಿಸಿದ  ಕವಿಗಳಲ್ಲೆರಿಗೂ ಪ್ರಶಂಶನ ಪತ್ರ ಹಾಗೂ ಕೃತಿಗಳನ್ನು ನೀಡಿ ಗೌರವಿಸಲಾಯಿತು.

ರಶ್ಮಿ ಸನಿಲ್  ಕಾರ್ಯಕ್ರಮ ನಿರೂಪಿಸಿದರು.

    

Additional image
05 Jan 2026, 08:59 AM
Category: Kaup
Tags: