ಕಾಪು : 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಟೂರ್ನಮೆಂಟ್ ಸಂಪನ್ನ
Thumbnail

ಕಾಪು : ಶ್ರೀ ನಾರಾಯಣ ಗುರು ಶಾಲಾ ಆಫ್ ಚೆಸ್, ಕಾಪು ಸಂಸ್ಥೆಯು ಮಂಗಳೂರು‌  ಅಫಿಲಿಯನ್ಸ್ ಟೆಕ್ನಾಲಜೀಸ್ ಅವರ ಸಹಯೋಗದಲ್ಲಿ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾ ಭವನದಲ್ಲಿ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.

ಟೂರ್ನಮೆಂಟ್‌ನಲ್ಲಿ ಲಕ್ಷಿತ್ ಬಿ. ಸಾಲಿಯಾನ್ ಅವರು 6 ಸುತ್ತುಗಳಲ್ಲಿ 6 ಅಂಕಗಳನ್ನು ಗಳಿಸಿ ಯಾವುದೇ ಸೋಲು ಕಾಣದೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 

ದಕ್ಷಿಣ ಕನ್ನಡದ ವಿಹಾನ್ ಶೆಟ್ಟಿ ಅವರು ದ್ವಿತೀಯ ಸ್ಥಾನ, ಹಾಗೂ ದಕ್ಷಿಣ ಕನ್ನಡದ ಆರೂಷ್ ಭಟ್ ಅವರು ತೃತೀಯ ಸ್ಥಾನ ಪಡೆದುಕೊಂಡರು.

ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. 

ಬಹುಮಾನ ವಿತರಕರಾಗಿ ಅವಿನಾಶ್ ಶೆಟ್ಟಿ ಸ್ಥಾಪಕರು ಎಫಿಲಿಯನ್ಸ್ ಟೆಕ್ನಾಲಜಿಸ್ ಮಂಗಳೂರು, ಮುಖ್ಯ ಅತಿಥಿಗಳಾಗಿ ಸುನಿಲ್ ಪೂಜಾರಿ ಕಾರ್ಯದರ್ಶಿ ಯುವವಾಹಿನಿ ಕಾಪು, ಜ್ಯೋತಿ ಇಂಗ್ಲೀಷ್ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು ಬೈಲೂರು, ಸುಧಾಕರ್ ಸಾಲ್ಯಾನ್, ಕಾಪು ಸಂಸ್ಥೆಯ ಅಧ್ಯಕ್ಷ  ಉಮಾನಾಥ ಕಾಪು, ನಾಗೇಶ್ ಕಾರಂತ್ ಪಾಂಗಾಳ, ನಿರ್ದೇಶಕಿ ಸೌಂದರ್ಯ ಯು ಕೆ ಉಪಸ್ಥಿತರಿದ್ದರು. 

ಸ್ಥಾಪಕ ಸಾಕ್ಷಾತ್ ಯುಕೆ ಸ್ವಾಗತಿಸಿದರು. ಬಾಬು ಜೆ ಪೂಜಾರಿ ಉಪ್ಪುಂದ ನಿರೂಪಿಸಿದರು.

 

06 Jan 2026, 08:55 AM
Category: Kaup
Tags: