ಶಿರ್ವ : ಇಲ್ಲಿನ ಪಂಜಿಮಾರು ಶ್ರೀ ಮುಲ್ಕಾಡಿ ದೇವಸ್ಥಾನ ದ್ವಾರದ ಮುಂಭಾಗ ಪ್ರತಿಷ್ಠಿತ ಎಮ್ ಆರ್ ಪಿ ಎಲ್ ಪೆಟ್ರೋಲ್ ಪಂಪ್ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಕೃಷ್ಣಾಪುರ ಮಠ ಉಡುಪಿಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚಿಸಿ, ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಿರ್ವ ಚರ್ಚ್ನ ಧರ್ಮ ಗುರು ಡಾ. ಲೆಸಿಲ್ಲೆ ಕ್ಲೇಪೋರ್ಡ್ ಡಿಸೋಜ, ಕತಿಬ್ ಸುನ್ನಿ ಜಾಮಿಯಾ ಮಸೀದಿ ಶಿರ್ವ ಇದರ ಮೌಲನ ಸಿರ್ಜದ್ದುನ್ ಜೈನಿ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತ ರಾಜೇಶ್, ಎಮ್ ಆರ್ ಪಿ ಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸ್ವಾಮಿ ಪ್ರಸಾದ್, ಅರವಿಂದ್ ಆರ್, ಉದ್ಯಮಿ ನವೀನ್ ಅಮೀನ್ ಶಂಕರಪುರ ಉಪಸ್ಥಿತರಿದ್ದರು.
ಸ್ಥಳೀಯ ರಿಕ್ಷಾ ಚಾಲಕ ಮಾಲಕರ ವತಿಯಿಂದ ಸಿ ಎನ್ ಜಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಂಸದರಿಗೆ ಮನವಿ ನೀಡಲಾಯಿತು.
ಸ್ಮಿತಾ ಎಂಟರ್ಪ್ರೈಸ್ ಪ್ರವರ್ತಕ ಸುಬ್ರಹ್ಮಣ್ಯ ಎನ್ ಭಟ್ ಸ್ವಾಗತಿಸಿದರು.
