ದಾನಗಳಲ್ಲಿ ಅತ್ಯಂತ ಸರ್ವ ಶ್ರೇಷ್ಠ ದಾನವೇ ರಕ್ತದಾನ : ರಕ್ತದಾನಿ ದೇವದಾಸ್ ಪಾಟ್ಕರ್
Thumbnail

ಶಿರ್ವ : ಅಪಘಾತ, ತುರ್ತು ಶಸ್ತ್ರಚಿಕಿತ್ಸೆ, ಹೆರಿಗೆ ಸಮಯದಲ್ಲಿ ರಕ್ತದ ಬೇಡಿಕೆ ಅಧಿಕವಾಗಿರುತ್ತದೆ. ಎಷ್ಟೇ ಹಣ ಕೊಟ್ಟರೂ ರಕ್ತ ಸಿಗುವುದಿಲ್ಲ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು. ಆರೋಗ್ಯವಂತ ಯುವಕರು, ಯುವತಿಯರು ರಕ್ತದಾನಕ್ಕೆ ಸಜ್ಜಾಗಬೇಕು. ರಕ್ತದಾನ ಅತ್ಯಂತ ಪುಣ್ಯ ಕಾರ್ಯವಾಗಿದ್ದು ದಾನಗಳಲ್ಲಿ ಅತ್ಯಂತ ಸರ್ವ ಶ್ರೇಷ್ಠ ದಾನವೇ ರಕ್ತದಾನ ಎಂದು 80 ಬಾರಿ ರಕ್ತದಾನ ಮಾಡಿದ ಹಾಗೂ ರಾಜ್ಯ ಸರಕಾರದಿಂದ ಶ್ರೇಷ್ಠ ರಕ್ತದಾನಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದೇವದಾಸ್ ಪಾಟ್ಕರ್ ಮುದರಂಗಡಿ ನುಡಿದರು.
ಅವರು ಶತಮಾನೋತ್ಸವದ ಸಂಭ್ರಮದಲ್ಲಿರುವ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಹಾಗೂ ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇದರ ಆಶ್ರಯದಲ್ಲಿ ಮಣಿಪಾಲ ಆಸ್ಪತ್ರೆಯ ರಕ್ತನಿಧಿ ವಿಭಾಗದ ಸಹಕಾರದೊಂದಿಗೆ  ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ರೋಟರಿ ಕ್ಲಬ್ ಶಿರ್ವ,ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಬಂಟಕಲ್ಲು,  ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ, ಬಿ.ಸಿ.ರೋಡ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಇವರ ಸಹಭಾಗಿತ್ವದಲ್ಲಿ  ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ  ದೇವದಾಸ್ ಪಾಟ್ಕರ್ ಸಹಿತ 20ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಲಾಯಿತು. ಶಿಬಿರದ ರಕ್ತದಾನಿಗಳಿಗೆ ವಿಶೇಷ ಕಿಟ್‌ನೀಡಿ ಅಭಿನಂದಿಸಲಾಯಿತು. 

 ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾ.ಪಂ.ಅಧ್ಯೆಕ್ಷೆ ಸವಿತಾ ರಾಜೇಶ್, ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ,ಅನಿತಾ ಡಿಸೋಜಾ ಬೆಳ್ಮಣ್, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ ಮಾತನಾಡಿದರು.
 ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಮೇಬಲ್ ಮಿನೇಜಸ್, ಉಮೇಶ್ ರಾವ್, ಡೆನೀಸ್ ಡಿಸೋಜಾ, ಡಾ,ವಿಟ್ಠಲ್ ನಾಯಕ್, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್, ವಿಶ್ವನಾಥ್ ಬಾಂದೇಲ್ಕರ್,ಇನ್ನಿತರರು ಉಪಸ್ಥಿತರಿದ್ದರು.

12 Jan 2026, 08:09 PM
Category: Kaup
Tags: