ಕಾಪು : ನಮ್ಮ ಸಮಾಜದ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಿರ್ವಹಿಸಬೇಕೆಂದು ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಅಧ್ಯಕ್ಷರಾದ ನೀಲಾನಂದ ನಾಯ್ಕ್ ಹೇಳಿದರು.
ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾಪು ತಾಲೂಕು ಪರಿವಾರ ನಾಯಕ ಸಮಾಜದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಸಂಘದ ಅಧ್ಯಕ್ಷ ಶೇಖರ್ ನಾಯ್ಕ್, ಶ್ರೀದೇವಿ - ಭೂದೇವಿ ವಿಷ್ಣುಮೂರ್ತಿ ದೇವಸ್ಥಾನ ಕೆಳಾರ್ಕಳಬೆಟ್ಟು ಇದರ ಅಧ್ಯಕ್ಷ ಸದಾನಂದ ನಾಯ್ಕ್ ಕೆಳಾರ್ಕಳಬೆಟ್ಟು, ರವೀಂದ್ರ ನಾಯ್ಕ್ ಬೆಳಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಪಾಂಡರಂಗ ನಾಯ್ಕ್ ಕಲ್ಯಾಣಪುರ, ಪ್ರಶಾಂತ್ ಶಿವ ನಾಯ್ಕ್, ಮಾಧವ ನಾಯ್ಕ್ ಪಯ್ಯಾರು, ಸಂಘದ ಉಪಾಧ್ಯಕ್ಷ ರಾಜೇಶ್ ನಾಯ್ಕ್ ಮಟ್ಟಾರ್, ಗೋಪಾಲ್ ನಾಯ್ಕ್ ಕರಂದಾಡಿ, ಕಾರ್ಯದರ್ಶಿ ರೋಹಿತ್ ನಾಯ್ಕ್ , ಕೋಶಾಧಿಕಾರಿ ದೇವೇಂದ್ರ ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಪು ತಾಲೂಕಿನಲ್ಲಿ 2025 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ರಾಹುಲ್ ನಾಯ್ಕ್, ನಮಿತ ನಾಯ್ಕ್ , ಶುಭಶ್ರೀ ನಾಯ್ಕ್ ಇವರನ್ನು ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸಂಘದ ಸದಸ್ಯರಾದ ಗಣೇಶ್ ನಾಯ್ಕ್ ಉಳಿಯಾರು, ಮೀನಾಕ್ಷಿ ನಾಯ್ಕ್ ಕರಂದಾಡಿ, ಸಂತೋಷ್ ನಾಯ್ಕ್ ಉಳಿಯಾರು ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಧನ ಸಹಾಯ ನೀಡಿದ ಸದಸ್ಯರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ನೀಲಾನಂದ ನಾಯ್ಕ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿತ್ ನಾಯ್ಕ್ ವರದಿ ವಾಚಿಸಿದರು. ಕೋಶಾಧಿಕಾರಿ ದೇವೇಂದ್ರ ನಾಯ್ಕ್ ಲೆಕ್ಕ-ಪತ್ರ ಮಂಡಿಸಿದರು. ಸುನಿಲ್ ನಾಯ್ಕ್ ಹಾಗೂ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಸುಜಾತ ವಂದಿಸಿದರು.
