ಉಚ್ಚಿಲ ಫ್ರೆಂಡ್ಸ್ ಉಚ್ಚಿಲ, ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ರೂ.4 ಲಕ್ಷ ವೆಚ್ಚದ ಜನರೇಟರ್ ಕೊಡುಗೆ
Thumbnail

ಪಡುಬಿದ್ರಿ : ಉಚ್ಚಿಲ ಫ್ರೆಂಡ್ಸ್ ಉಚ್ಚಿಲ, ಇದರ ಸದಸ್ಯರಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲಕ್ಕೆ ಬುಧವಾರ ಸಂಜೆ 15 ಕೆವಿ ಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ ಹಸ್ತಾಂತರಿಸಿದ್ದಾರೆ.
 ದೇವಳದ ಅರ್ಚಕ ಗೋವಿಂದ ಭಟ್ ರವರು ಪೂಜಾ ವಿಧಾನ ಪೂರೈಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

 ವಿಷ್ಣುಮೂರ್ತಿ ಭಟ್ ಜನರೇಟರ್ ಉದ್ಘಾಟನೆಯನ್ನು ನೆರವೇರಿಸಿದರು.

  ಈ ಸಂದರ್ಭ ಉದ್ಯಮಿ ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಧ್ಯುಮಣಿ ಭಟ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕಾರ್ಯದರ್ಶಿ ರವಿಕಿರಣ್, ಕೋಶಾಧಿಕಾರಿ ವಿಷ್ಣುಮೂರ್ತಿ ಭಟ್, ಮನೋಜ್ ಶೆಟ್ಟಿ, ಗುರುರಾಜ್ ಉಚ್ಚಿಲ, ವಿನೋದ್ ಸುವರ್ಣ, ಪ್ರಮೋದ್ ದೇವಾಡಿಗ, ಸಂಪತ್ ಕುಮಾರ್, ಹರ್ಷಿತ್ ಆಚಾರ್ಯ,ಸತೀಶ್ ಆಚಾರ್ಯ, ದಾಮೋದರ್ ದೇವಾಡಿಗ, ಲೀಲಾಧರ, ಹೃತಿಕ್ ಪೂಜಾರಿ, ದೇವಳದ ಮೆನೇಜರ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

14 Jan 2026, 07:59 PM
Category: Kaup
Tags: