ಜ. 26: ಕುಲಾಲ ಸಂಘ ಪಿಂಪ್ರಿ - ಚಿಂಚಿವಾಡ್ ಪುಣೆಯ 15 ನೇ ವರ್ಷದ ವಾರ್ಷಿಕ ಮಹಾಸಭೆ
Thumbnail

ಪುಣೆ : ಕುಲಾಲ ಸಂಘ (ರಿ.) ಪಿಂಪ್ರಿ - ಚಿಂಚಿವಾಡ್ ಪುಣೆಯ 15 ನೇ ವರ್ಷದ  ವಾರ್ಷಿಕ ಮಹಾಸಭೆಯು ಜನವರಿ 26 ರಂದು ಬೆಳಿಗ್ಗೆ 10 ರಿಂದ ಜ್ಞಾನಜ್ಯೋತಿ ಸಾವಿತ್ರಿದಾಯಿ  ಸ್ಮಾರಕ ಭವನ, ಅಂಬೇಡ್ಕರ್ ಪ್ರತಿಮೆಯ ಹಿಂಭಾಗ ಪಿಂಪ್ರಿ ಇಲ್ಲಿ ಸಂಘದ ಅಧ್ಯಕ್ಷರು  ರವಿ.ಕೆ.ಮೂಲ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸುಚಿತ್ರ ದಿನಕರ್ ಬಂಜನ್, ಶ್ರೀಧರ್ ಕೆ ಶೆಟ್ಟಿ, ದೊಡ್ಡಣ್ಣ ಸಿ ಮೂಲ್ಯ, ವಕೀಲರು  ಅಪ್ಪು ಮೂಲ್ಯ ಸೇರಿದಂತೆ ಅನೇಕ ಸ್ವಜಾತಿ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಪುಣೆಯ ಪಿಂಪ್ರಿ ಕುಲಾಲ ಸಂಘ ಪ್ರಕಟಣೆಯಲ್ಲಿ ತಿಳಿಸಿರುವರು.

15 Jan 2026, 07:25 AM
Category: Kaup
Tags: