ಶ್ರೀ ಕ್ಷೇತ್ರ ಶಂಕರಪುರ: ಶ್ರೀ ಸೌಭಾಗ್ಯ ಕಾರ್ಯಕ್ರಮದಡಿ ಚಿನ್ನದ ಮೂಗುತಿ ಧಾರಣೆ
Thumbnail

ಕಾಪು :  ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ದ್ವಾರಕಾಮಾಯಿ ಮಠದ ಏಕಾಜಾತಿ ಧರ್ಮ ಪೀಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಂತೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಸೌಭಾಗ್ಯ ಕಾರ್ಯಕ್ರಮದ ಮುಖ್ಯೆನ ಚಿನ್ನದ ಮೂಗುತಿ ಧಾರಣೆಯು ಶುಕ್ರವಾರ ಜರಗಿತು.

 ಹಿಂದೂ ಹೆಣ್ಣು ಮಕ್ಕಳ ಭಾಗ್ಯೋದಯದ ಬೆಳಕು ಶ್ರೀ ಸೌಭಾಗ್ಯ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಶಂಕರಪುರದಲ್ಲಿ ಆಯೋಜಿಸಿದ್ದು, ಗುರೂಜಿ ಅವರು ಪ್ರತಿ ಗುರುವಾರ ಹಾಗೂ ಶುಕ್ರವಾರ 5 ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಇಂದು 4 ಹೆಣ್ಣು ಮಕ್ಕಳಿಗೆ ಗುರೂಜಿಯವರ ಉಪಸ್ಥಿತಿಯಲ್ಲಿ ಮೂಗುತಿ ಧಾರಣೆಯು ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಕಾಶ್ ಆಚಾರ್ಯರವರ ತಂಡ ಮೂಗುತಿ ಚುಚ್ಚುವ ಕಾರ್ಯಕ್ರಮವನ್ನು ಕೈಗೊಂಡಿದ್ದರು ಎಂದು ಮಠದ ಪ್ರಕಟಣೆ ತಿಳಿಸಿದೆ.

23 Jan 2026, 03:28 PM
Category: Kaup
Tags: