ಕಾಂಗ್ರೆಸ್ ಪಕ್ಷವೇ ಇಲ್ಲದ ಕಾಲದಲ್ಲಿ ಕೇಸರಿ ಧ್ವಜದ ಅಸ್ಥಿತ್ವ ಪ್ರಾರಂಭ : ರಮಿತಾ ಸೂರ್ಯವಂಶಿ
Thumbnail

ಕಾಪು : ಉಡುಪಿ ಪರ್ಯಾಯದಲ್ಲಿ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿದರು ಅನ್ನುವ ವಿಷಯದಲ್ಲಿ ಗೊಂದಲ ಮಾಡಿಕೊಂಡು ಹಿಂದೂಗಳ ಭಾವನೆಗೆ ಹಾಗೂ ಪರ್ಯಾಯಕ್ಕೆ ಅವಮಾನ ಮಾಡುವ ವ್ಯಕ್ತಿಗಳಿಗೆ ಮೊದಲು ಶಿಕ್ಷೆ ನೀಡಬೇಕು ಎಂದು ಬಿಜೆಪಿ ಮುಖಂಡೆ, ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಹೇಳಿದ್ದಾರೆ.

ಪರ್ಯಾಯ ಹಿಂದೂ ಕಾರ್ಯಕ್ರಮವಾಗಿದ್ದು ಇಲ್ಲಿ ಎಲ್ಲರೂ ಪಕ್ಷವನ್ನು ಮರೆತು ಕೆಲಸ ಮಾಡುವ ಅಗತ್ಯ ಇತ್ತು. ಅಲ್ಲದೇ ಕಾಂಗ್ರೆಸ್ ನವರು ಭಾಗವ ಧ್ವಜಕ್ಕೆ ಅವಮಾನಿಸಿದ್ದಲ್ಲದೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಭಾಗವ ಧ್ವಜ ಬುದ್ಧರು ಬಳಸಿದ ಇತಿಹಾಸ ಕಾಣಬಹುದು. ಮುಂದೆ ಶಿವಾಜಿ ಮಹಾರಾಜರ ಕಾಲದಲ್ಲಿ ಕೇಸರಿ ಧ್ವಜವನ್ನು ಶಿವಾಜಿಯ ಅಧ್ಯಾತ್ಮಿಕ  ಗುರು ಸಮರ್ಥ ರಾಮದಾಸ್  ತನ್ನ ಅಂಗ ವಸ್ತ್ರದಿಂದ ಹರಿದು ಕೊಟ್ಟಿದ್ದರಿಂದಾಗಿ ಅದು ತ್ರಿಕೋನ ಆಕಾರದಲ್ಲಿ ಇತ್ತು ಅನ್ನುವ ಇತಿಹಾಸ ಇದೆ.

 ರಾಮಾಯಣ, ಮಹಾಭಾರತ ಕಾಲದಲ್ಲೂ ಇದ್ದ ಇತಿಹಾಸವಿದೆ ಅಂತೂ ಕಾಂಗ್ರೆಸ್ ಪಕ್ಷವೇ ಇಲ್ಲದ ಕಾಲದಲ್ಲಿ ಕೇಸರಿ ಧ್ವಜದ ಅಸ್ಥಿತ್ವ ಪ್ರಾರಂಭವಾಗಿದೆ. ಅಂದ ಮೇಲೆ ಅದರ ಬಗ್ಗೆ ಮಾತಾಡುವ ನೈತಿಕತೆಯು ಇವರಿಗಿಲ್ಲ. ಅನ್ಯಧರ್ಮದವರನ್ನು ಓಲೈಕೆ ಮಾಡುವ ಕಾರಣಕ್ಕೆ ಇಂತಹ ನೀಚ ಕೆಲಸಕ್ಕೆ ಕೈ ಹಾಕಿ ಅದ್ಧುರಿ ಆಗಿರುವ ಪರ್ಯಾಯಕ್ಕೆ ಅವಮಾನ ಮಾಡಬೇಡಿ.  ಮುಂದೆ ಇದರಿಂದ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಮಾಡಿದಲ್ಲಿ ಮಾತೃ ಶಕ್ತಿ ರಸ್ತೆಗಿಳಿಯಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.

23 Jan 2026, 03:35 PM
Category: Kaup
Tags: