ಜ.25 : ಶಿರ್ವದಲ್ಲಿ ರಥ ಸಪ್ತಮಿ -ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ
Thumbnail

ಶಿರ್ವ : ಪತಂಜಲಿ ಯೋಗ ಸಮಿತಿ, ಉಡುಪಿ ಜಿಲ್ಲೆ ಮತ್ತು ಶಿರ್ವ ಇದರ ನೇತೃತ್ವದಲ್ಲಿ ಮಹಿಳಾ ಮಂಡಲ(ರಿ.) ಶಿರ್ವ, ಯುವಕ ಮಂಡಲ(ರಿ.) ಕುತ್ಯಾರು, ಮತ್ತು ಶಿರ್ವ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜ.25 ರವಿವಾರ 'ರಥಸಪ್ತಮಿ"(ಸೂರ್ಯ ಜಯಂತಿ)ಯ ಶುಭಾವಸರದಲ್ಲಿ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಳದ ವಠಾರದಲ್ಲಿ  "ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞದ ದಶಮಾನೋತ್ಸವ" ಸಂಪನ್ನಗೊಳ್ಳಲಿದೆ.

"ರಥಸಪ್ತಮಿ"ಯ ದಿನವನ್ನು ಭಾರತೀಯ ಶಾಸ್ತ್ರಗಳ ಪ್ರಕಾರ "ಸೂರ್ಯ ಜಯಂತಿ'ಯಾಗಿ ಆಚರಿಸಲಾಗುತ್ತಿದೆ.  ಸೂರ್ಯನು ಮಕರ ರಾಶಿಯಿಂದ  ಉತ್ತರಾಭಿಮುಖವಾಗಿ  ಚಲನೆಯನ್ನು ಆರಂಭಿಸಿ ಏಳನೇಯ ದಿನವನ್ನು "ಮಾಘ ಶುಕ್ಲಸಪ್ತಮಿ" ಎಂದು ಕರೆಯುತ್ತಾರೆ. ಜಗತ್ತಿನ ಜೀವ ಜಂತುಗಳಿಗೆ  ಚೈತನ್ಯವನ್ನು  ತುಂಬಿದ ಸೂರ್ಯ ಜಯಂತಿಯಂದು  ನಾವು ನಿರೋಗಿಗಳಾಗಿ  ಶತಸಂವತ್ಸರ ಕಾಲ ಬಾಳುವಂತಾಗಲಿ ಎಂಬ ಆಶಯದೊಂದಿಗೆ  ಶಿರ್ವದಲ್ಲಿ ಪತಂಜಲಿ ಯೋಗ ಸಮಿತಿಯ ನೇತೃತ್ವದಲ್ಲಿ ಕಳೆದ ಒಂಭತ್ತು ವರ್ಷಗಳಿಂದ "ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ" ನಡೆಯುತ್ತಿದೆ.
 

23 Jan 2026, 05:04 PM
Category: Kaup
Tags: