ಕಾಪು : ಉಡುಪಿ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಕುತ್ಯಾರು ಇವರ ಆಶ್ರಯದಲ್ಲಿ ಕುತ್ಯಾರು ಪ್ರೀಮಿಯರ್ - 2026, 40 ಗಜಗಳ ಕ್ರಿಕೆಟ್ ಪಂದ್ಯಾಟ ಯುವಕ ಮಂಡಲದ ವಠಾರದಲ್ಲಿ ಭಾನುವಾರ ನಡೆಯಿತು.
ಯುವಕ ಮಂಡಲ ಅಧ್ಯಕ್ಷ ಮನೋಜ್ ಕುತ್ಯಾರು ಅಧ್ಯಕ್ಷತೆಯಲ್ಲಿ, ಪಂದ್ಯಾಟದ ಉದ್ಘಾಟನೆಯನ್ನು ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವೇ|ಮೂ| ಕೇಂಜ ಶ್ರೀಧರ್ ತಂತ್ರಿ, ಶಿರ್ವ ಸಹಕಾರಿ ವ್ಯವಸಾಯಿಕ ಸಂಘ. ನಿ. ಶಿರ್ವ ಇದರ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಠಾಣೆಯ ಪಿ.ಎಸ್.ಐ ಮಂಜುನಾಥ್
ಸಭಾಳಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ಶಿರ್ವದ ಉದ್ಯಮಿ ರತನ್ ಶೆಟ್ಟಿ ಕೊಲ್ಲೊಟ್ಟು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಯುವಕ ಮಂಡಲ ಕುತ್ಯಾರು ಇದರ ಮಾಜಿ ಅಧ್ಯಕ್ಷರಾದ ಗುಲ್ವಾರ್ ಖಾನ್, ಉಲ್ಲಾಯ ಫ್ರೆಂಡ್ಸ್ ಕುತ್ಯಾರು ಅಧ್ಯಕ್ಷರಾದ ಭಾರ್ಗವ ತಂತ್ರಿ, ಉದ್ಯಮಿ ದಿನೇಶ್ ಕುಲಾಲ್ ಶಿರ್ವ, ಕುತ್ಯಾರು ಗ್ರಾಮಸ್ಥರು, ಕ್ರೀಡಾಭಿಮಾನಿಗಳು, ಯುವಕ ಮಂಡಲ (ರಿ.) ಕುತ್ಯಾರು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
