ಜ.31 : ಕಾಪು ಜೆಸಿಐ ಪದಗ್ರಹಣ
Thumbnail

ಕಾಪು : ಪ್ರತಿಷ್ಠಿತ ಕಾಪು ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣವು ಜನವರಿ 31 ರಂದು ಸಂಜೆ 7 ಗಂಟೆಗೆ ಕಾಪುವಿನ ಜೆಸಿಐ ಭವನದಲ್ಲಿ ಜರಗಲಿದೆ.

ನೂತನ ಅಧ್ಯಕ್ಷರಾಗಿ ನಮ್ಮ ಕಾಪು ನ್ಯೂಸ್ ಇದರ ಪ್ರವರ್ತಕ ವಿಕ್ಕಿ ಪೂಜಾರಿ ಮಡುಂಬು ಅಧಿಕಾರ ವಹಿಸಲಿದ್ದಾರೆ.

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಪು ಶ್ರೀ ಹೊಸ ಮಾರಿಗುಡಿಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ.ವಾಸುದೇವ ಶೆಟ್ಟಿ ಭಾಗವಹಿಸಲಿದ್ದು, ಜೆಸಿಐ ಇಂಡಿಯಾ ವಲಯ 15ರ ಅಧ್ಯಕ್ಷರಾದ ಜೆಎಫ್ಎಫ್ ಸಂತೋಷ್ ಶೆಟ್ಟಿ, ಅತಿಥಿಗಳಾಗಿ ವಲಯ 15ರ ಮಾಜಿ‌ ಅಧ್ಯಕ್ಷರಾದ ಜೆಸಿಐ ಪಿಪಿಪಿ ರಾಕೇಶ್ ಕುಂಜೂರು, ವಲಯ 15ರ ವಲಯ ಉಪಾಧ್ಯಕ್ಷರಾದ ಜೆಎಫ್ಎಮ್ ಅರುಣ್ ಮಂಜ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಜೆಸಿಐ ಕಾಪು ಪ್ರಕಟಣೆ ತಿಳಿಸಿದೆ.

29 Jan 2026, 05:19 PM
Category: Kaup
Tags: