ಫೆ.2 : ಜೆಸಿಐ ಕಟಪಾಡಿ - ಪದಗ್ರಹಣ
ಕಾಪು : ಜೆಸಿಐ ಕಟಪಾಡಿ ವಲಯ ಬಿ, ಝೋನ್ 15ರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ.2, ಸೋಮವಾರ ಕಟಪಾಡಿ ಪಲ್ಲಿಗುಡ್ಡೆಯ ಜೆಸಿ ಭವನದಲ್ಲಿ ಜರಗಲಿದೆ.
ನೂತನ ಅಧ್ಯಕ್ಷರಾಗಿ ಜೆಸಿ ಧೀರಜ್ ಜತ್ತನ್ ಅಧಿಕಾರ ವಹಿಸಲಿದ್ದು, ಅವರ ನೂತನ ತಂಡಕ್ಕೆ ಪದಪ್ರದಾನ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಲ.ಡಾ.ಪ್ರಜ್ವಲ್ ಕೆ.ರಾವ್, ಝೋನ್ 15ರ ಝೋನ್ ಅಧ್ಯಕ್ಷ ಜೆಎಫ್ಎಫ್ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರಾದ ಜೆಸಿ ಪ್ರದೀಪ್ ಶೆಟ್ಟಿ ಇನ್ನ ಭಾಗವಹಿಸಲಿದ್ದಾರೆ ಎಂದು ಜೆಸಿಐ ಕಟಪಾಡಿ ಇದರ ಪ್ರಕಟಣೆ ತಿಳಿಸಿದೆ.
