ಕಾಪು : ಇನ್ನಂಜೆ ಮಹಿಳಾ ಮಂಡಳಿಯಿಂದ ಹೊಸಬೆಳಕು ಆಶ್ರಮ ಭೇಟಿ
Thumbnail

ಕಾಪು : ಇನ್ನಂಜೆ ಮಹಿಳಾ ಮಂಡಳಿ (ರಿ.) ಇನ್ನಂಜೆ ಇದರ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಡಳಿಯ ಸದಸ್ಯೆಯರು ಕಾರ್ಕಳ ಬೈಲೂರು ಹೊಸಬೆಳಕು ಆಶ್ರಮಕ್ಕೆ ಭೇಟಿ ನೀಡಿ ಧನಸಹಾಯ ಹಾಗೂ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ನೀಡಿ‌, ವಾರ್ಷಿಕೋತ್ಸವ ಆಚರಿಸಿದರು.

ಸದಸ್ಯರೆಲ್ಲರ ಸಹಕಾರದಿಂದ ರೂ. 28,500 ನಗದು ಹಾಗೂ ಸುಮಾರು ರೂ.15 ಸಾವಿರ  ವರೆಗಿನ ಆಹಾರ ಸಾಮಗ್ರಿಗಳನ್ನು ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸಖುನಂದನ್ ಕುಮಾರ್, ಕಾರ್ಯದರ್ಶಿ ಸೀಮಾ ಮಾರ್ಗರೇಟ್ ಡಿಸೋಜ, ಗೌರವಾಧ್ಯಕ್ಷೆ ಪುಷ್ಪ ರವೀಂದ್ರ ಶೆಟ್ಟಿ, ಪರಿಮಳ ಮಿತ್ತಂತಾಯ, ಗೌರವಸಲಹೆಗಾರ ಶ್ವೇತಾ ಎಲ್ ಶೆಟ್ಟಿ, ಕೋಶಾಧಿಕಾರಿ ಅನಿತಾ ಮಥಾಯಸ್, ಎಸ್ ವಿ ಎಚ್ ಶಾಲೆಯ ನಿವೃತ್ತ ಅಧ್ಯಾಪಕರಾದ ನಂದನ್ ಕುಮಾರ್, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 

ಆಶ್ರಮದ ನಿವಾಸಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

01 Feb 2026, 05:34 PM
Category: Kaup
Tags: