ರಾಜ್ಯ ಮಟ್ಟದ ಪ್ರತಿಭಾಕಾರಂಜಿಯ ತುಳು ಭಾಷಣ ಸ್ಪರ್ಧೆಗೆ ವರ್ಷಿಣಿ ಮುಳ್ಳುಗುಡ್ಡೆ ಆಯ್ಕೆ
Thumbnail

ಕಾಪು : ಉಡುಪಿ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯ ತುಳು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು
ಫೆಬ್ರವರಿ 7 ರಂದು ಕೊಪ್ಪಳದಲ್ಲಿ ನಡೆಯುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತುಳು ಭಾಷಣ ಸ್ಪರ್ಧೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಹೆಬ್ರಿ ಇಲ್ಲಿನ ಹತ್ತನೆಯ ತರಗತಿ ವಿದ್ಯಾರ್ಥಿನಿ ವರ್ಷಿಣಿ ಮುಳ್ಳುಗುಡ್ಡೆ ಸ್ಪರ್ಧಿಸಲಿದ್ದಾರೆ.

ಇವರು ಪೆರ್ಡೂರು ಗ್ರಾಮದ ಕೆಳಮುಳ್ಳುಗುಡ್ಡೆ ರವಿಕುಲಾಲ್ ಮತ್ತು ಮಮತಾ ಕುಲಾಲ್ ದಂಪತಿಗಳ ಪುತ್ರಿ.

06 Feb 2026, 11:20 PM
Category: Kaup
Tags: