ಕಟಪಾಡಿ : ಅಬಾಕಸ್ ಮತ್ತು ವೇದಗಣಿತ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರಾಚಿ ಎಸ್ ಪೂಜಾರಿ
ಕಾಪು : ಇತ್ತೀಚಿಗೆ ಮೂಡಬಿದಿರೆಯಲ್ಲಿ ನಡೆದ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ್ದ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ವೇದಗಣಿತ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ 21ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 3ನೇ ಸ್ಥಾನ, ಅಲ್ಲದೇ 2ನೇ ಅಂತರಾಷ್ಟ್ರೀಯ WEKIE CHAMP ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು
ಕಟಪಾಡಿಯ ಪ್ರಾಚಿ ಎಸ್ ಪೂಜಾರಿ ಪಡೆದಿರುತ್ತಾರೆ.
ಈಕೆ ಆನಂದ ತೀರ್ಥ ವಿದ್ಯಾಲಯ ಪಾಜಕ ಕುಂಜಾರುಗಿರಿ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ. ಉದ್ಯಾವರ ಸಂಪಿಗೆನಗರ ಆರೂರು ತೋಟದ ಸಂತೋಷ ಪೂಜಾರಿ ಹಾಗೂ ಆರತಿ ಪೂಜಾರಿಯವರ ಪುತ್ರಿಯಾಗಿದ್ದಾರೆ.
ಪ್ರಸ್ತುತ ಕಟಪಾಡಿಯ ರೈನ್ ಬೋ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯಲ್ಲಿ ಹರಿಣಿ ರಾಜೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರ ಈ ಸಾಧನೆಗೆ ಕುಟುಂಬಸ್ಥರು ಹಾಗೂ ಶಿಕ್ಷಕ ವೃಂದ ಶುಭಹಾರೈಸಿದ್ದಾರೆ.
