ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸದಸ್ಯರಿಂದ ಶ್ರಮದಾನ
Thumbnail

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಇದರ 374 ನೇ ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಭಾನುವಾರ  ಪಡುಬಿದ್ರಿ ಬೀಚ್ ರಸ್ತೆ ಮತ್ತು ಪಡುಬಿದ್ರಿ ಬ್ರಹ್ಮಸ್ಥಾನ ರಸ್ತೆ ಕೂಡುವ ತಿರುವಿನಲ್ಲಿ ರಸ್ತೆಯ ಬದಿಯಲ್ಲಿ ದಟ್ಟವಾಗಿ ಬೆಳೆದ ಹುಲ್ಲುಗಳು ಅಪಾಯದ ಮುನ್ಸೂಚನೆ ನೀಡುತ್ತಿತ್ತು ಅದನ್ನು ಮನಗಂಡ ಸಂಸ್ಥೆಯ ಸದಸ್ಯರು ಶ್ರಮದಾನದ ಮೂಲಕ  ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ಶ್ರಮದಾನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

Additional image Additional image Additional image Additional image
08 Feb 2026, 02:28 PM
Category: Kaup
Tags: #padubidri