ಪಡುಬಿದ್ರಿ : ವಾಡ್೯ ಸಭೆಗೆ ಪಿಡಿಒರವರ ಗೈರು ಹಾಗೂ ಅನುಮತಿ ನೀಡುವಾಗ ಸ್ಥಳ ಪರಿಶೀಲಿಸದೆ ಅನುಮತಿ ನೀಡುವ ಬಗ್ಗೆಯೂ ಗ್ರಾಮಸ್ಥರ ಜೊತೆಗೆ ಪಂಚಾಯತ್ ಸದಸ್ಯರ ಅಸಮಾಧಾನಕ್ಕೆ ಕಾರಣವಾದ ಪಡುಬಿದ್ರಿ ಗ್ರಾಮ ಪಂಚಾಯತ್ ನ ವಾಡ್೯ 5 ಮತ್ತು 6ನೇ ಸಭೆಯು ಶನಿವಾರ ಸಂಜೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಪಡುಹಿತ್ಲುಗೆ ಸಾಗುವ ರಸ್ತೆಯಲ್ಲಿ ಸರಿಯಾದ ಪ್ಯಾಚ್ ವಕ್೯ ನಡೆಸದ ಬಗ್ಗೆ, ಹಲವಾರು ಕುಟುಂಬಗಳ ಬಿಪಿಎಲ್ ಕಾಡ್೯ ರದ್ಧತಿ, ಮೆಸ್ಕಾಂರವರು ತಂತಿಗೆ ತಗುಲಿದ ಗೆಲ್ಲನ್ನು ಮಳೆಗಾಲಕ್ಕೂ ಮುನ್ನ ಕಡಿಯಬೇಕೆಂದು, ಸದಸ್ಯರಿಗೆ ಗೊತ್ತಾಗದೆ ಪಿಡಿಒರವರು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ಜೊತೆಗೆ ರಸ್ತೆಯನ್ನು ಆಕ್ರಮಿಸಿ ಕೌಂಪೌಂಡ್ ಕಟ್ಟಿ ಹೂವಿನ ಗಿಡಗಳನ್ನು ಮಾಡಿದರೂ ಪಂಚಾಯತ್ ಗಮನವಹಿಸುತ್ತಿಲ್ಲ.
ವಾಡ್೯ 5ರಲ್ಲಿರುವ ಲೇ ಔಟ್ ನವರಿಂದ ದಾರಿ ಮುಚ್ಚಿದ ಬಗ್ಗೆ ಮತ್ತು ಕಸವನ್ನು ಪಂಚಾಯತ್ ಕಸ ವಿಲೇವಾರಿಗೆ ನೀಡದಿರುವ ಬಗ್ಗೆ, ನದಿಯ ಹೂಳೆತ್ತುವ ಕಾರ್ಯ ಮಾಡಿ ನೆರೆಯನ್ನು ಕಡಿಮೆ ಮಾಡಿ, ನೀರಿನ ಪೈಪ್ ಒಡೆದು ನೀರು ಪೋಲು, 6ನೇ ವಾಡ್೯ ನಲ್ಲಿ ಕೆಸರು ನೀರು ಬಂದು ಕುಡಿಯಲು ಯೋಗ್ಯವಾಗಿಲ್ಲ ಎಂದು, ನಂದಿಕೂರಿನಲ್ಲಿ ಕಾರ್ಯಚರಿಸುವ ಎಂ 11 ಕಂಪನಿಯಿಂದ ಬೆಳಗ್ಗೆ, ಸಂಜೆ ಸಮಯ ವಾಸನೆ ಬರುತ್ತಿದೆ ಎನ್ನುವುದರ ಬಗ್ಗೆ ಗ್ರಾಮಸ್ಥರಿಂದ ಪಂಚಾಯತ್ ಗಮನಕ್ಕೆ ತರಲಾಯಿತು.
ಗ್ರಾಮಸಭೆಯಲ್ಲಿ ಪಂಚಾಯತ್ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಸಮ್ಮುಖ ಪರಿಹಾರ ನೀಡುವ ಬಗ್ಗೆ, ಪಡುಬಿದ್ರಿಯಲ್ಲಿರುವ ಕೆರೆಗಳ ಅಭಿವೃದ್ಧಿ ಮಾಡಿ ನೀರಿನ ಸಮಸ್ಯೆ ಹೋಗಲಾಡಿಸುವ ಬಗ್ಗೆ, ಕುಡಿಯುವ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವುದನ್ನು ತಪ್ಪಿಸಿ ಎಂದು ಪಂಚಾಯತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ವಾಡ್೯ 5 ರ ಸದಸ್ಯರಾದ ಮಹೇಂದ್ರ, ಯಶೋಧ, ವಾಡ್೯ 6 ರ ಸದಸ್ಯರಾದ ವಿಜಯಲಕ್ಷ್ಮಿ, ಗಣೇಶ್ ಕೋಟ್ಯಾನ್, ಪಂಚಾಯತ್ ಕಾರ್ಯದರ್ಶಿ ರೂಪಲತಾ, ಗ್ರಾಮಸ್ಥರು ಉಪಸ್ಥಿತರಿದ್ದರು.
