ಮಾರ್ಚ್ 1 : ಕಾಂತನಾಧಿಕಾರಿ ಜುಮಾದಿ ದೇವಸ್ಥಾನ ಪಯ್ಯಾರು, ಕಳತ್ತೂರು - ವರ್ಧಂತ್ಯುತ್ಸವ ಹಾಗೂ ಕಾಲಾವಧಿ ನೇಮ
Thumbnail

ಕಾಪು : ಇತಿಹಾಸ ಪ್ರಸಿದ್ಧ ಕಳತ್ತೂರು ಪಯ್ಯಾರು ಶ್ರೀ ಕಾಂತನಾಧಿಕಾರಿ ಜುಮಾದಿ ದೈವಸ್ಥಾನ ಇಲ್ಲಿ ಜುಮಾದಿ ಮತ್ತು ಜುಮಾದಿ ಬಂಟ ದೈವಗಳ ನೇಮ ಹಾಗೂ ನಾಗದೇವರ ವರ್ಧಂತ್ಯುತ್ಸವದ ಅಂಗವಾಗಿ ನವಕ ಕಲಾತತ್ವ ಹೋಮ, ನವಕ ಕಲಶಾಭಿಷೇಕ, ಚಂಡಿಕಾಹೋಮ ಆಗಮ ಮತ್ತು ಜ್ಯೋತಿಷ್ಯ ವಿದ್ವಾನ್ ನೀಲಾವರ ಶ್ರೀ ರಘುರಾಮ ಮದ್ಯಸ್ತರ ನೇತೃತ್ವದಲ್ಲಿ ಮಾರ್ಚ್ 1ರ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು.

 ಬೆಳಿಗ್ಗೆ ಗಂಟೆ 9 ರಿಂದ ಗುರು ಗಣಪತಿ ಪ್ರಾರ್ಥನೆ, ಪುಣ್ಯಹವಾಚನ, ನವಕಪ್ರಧಾನ, ಕಲಶ ಸ್ಥಾಪನೆ, ಕಲಾತತ್ವ ಹೋಮ, ಪೂರ್ಣಹುತಿ, ನವಕ ಕಲಶಾಭಿಷೇಕ, ಚಂಡಿಕಾ ಹೋಮ, ಪೂರ್ಣಾಹುತಿ ಮಹಾಪೂಜೆ, ನಾಗದೇವರಿಗೆ ನವಕಪ್ರಧಾನ ಕಲಶ ತತ್ವ ಹೋಮ, ಕಲಶಾಭಿಷೇಕ, ತನು ತಂಬಿಲ, ಮಹಾಪೂಜೆ, ಮಲೆ ಜುಮಾದಿ ಸನ್ನಿಧಾನಕ್ಕೆ ಮೆರವಣಿಗೆ ಮತ್ತು ಪ್ರಸನ್ನ ಪೂಜೆ, ನೇಮದ ಚಪ್ಪರ ಆರೋಹಣ, ಮದ್ಯಾಹ್ನ ಗಂಟೆ 1ರಿಂದ ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಭoಡಾರ ಇಳಿಯುವುದು.

 ಭಕ್ತಿ ಸುಧೆ ಕಾರ್ಯಕ್ರಮ. ರಾತ್ರಿ ಗಂಟೆ 8 ರಿಂದ ಅನ್ನ ಸಂತರ್ಪಣೆ. ರಾತ್ರಿ ಘಂಟೆ 9:30 ಕ್ಕೆ ಜುಮಾದಿ ಮತ್ತು ಬಂಟ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ ಎಂದು ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಚಂದ್ರ ಗುರ್ಮೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

28 Feb 2026, 02:15 PM
Category: Kaup
Tags: