ಕಾಪು ಶ್ರೀ ಹೊಸಮಾರಿಗುಡಿ : ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ
ಕಾಪು : ಇಲ್ಲಿನ ಶ್ರೀ ಹೊಸಮಾರಿಗುಡಿ ದೇವಳದಲ್ಲಿ ಉಚ್ಚಂಗಿ ಸಹಿತ ಶ್ರೀಮಾರಿಯಮ್ಮ ದೇವಿಯ ಪುನ:ಪ್ರತಿಷ್ಠೆಯ ಪ್ರಥಮ ವರ್ಧಂತ್ಯೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಅನುಷ್ಠಾನಗಳು, ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಇವರ ಸಹಭಾಗಿತ್ವದಲ್ಲಿ ಗದ್ದಿಗೆಯ ಶ್ರೀಚಕ್ರಯಂತ್ರ ಪೂಜಾ, ದಿವ್ಯ ಶ್ರೀಚಕ್ರಯಂತ್ರ ದರ್ಶನ, ಖಡ್ಗಮಾಲಾಮಂತ್ರ ಹೋಮ, ಶ್ರೀಯಂತ್ರ ಪ್ರಸನ್ನಪೂಜಾ ಕಾರ್ಯಗಳು ಜರಗಿದವು.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ವಿವಿಧ ಸಮಿತಿಗಳ ಮುಖ್ಯಸ್ಥರು, ಶ್ರೀಕ್ಷೇತ್ರದ ಭಗವದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
