ಮಾ.14 : ಯುವಸೇನೆ ಮಡುಂಬು ವೈ.ಎಸ್.ಎಮ್.ಫ್ರೆಂಡ್ಸ್ ಮಡುಂಬು : 19ನೇ ವಾರ್ಷಿಕೋತ್ಸವ
Thumbnail

ಕಾಪು : ಯುವಸೇನೆ ಮಡುಂಬು ವೈ.ಎಸ್.ಎಮ್.ಫ್ರೆಂಡ್ಸ್ ಮಡುಂಬು ಇದರ
19ನೇ ವಾರ್ಷಿಕೋತ್ಸವ ಮಾ.14, ಶನಿವಾರ
ರಾತ್ರಿ 7 ಗಂಟೆಯಿಂದ ಮಡುಂಬು ಬೆರ್ಮೋಟ್ಟು ದೇವಸ್ಥಾನದ ಬಳಿ ಜರಗಲಿದೆ.

ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಂಸದರಾದ ಕ್ಯಾ. ಬ್ರಿಜೆಶ್ ಚೌಟ, ಮಡುಂಬುವಿನ ಜ್ಯೋತಿಷಿ, ಪುರೋಹಿತರಾದ ಕೆ.ಪಿ ಶ್ರೀನಿವಾಸ ತಂತ್ರಿ, ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ, ಮುನಿಯಾಲು, ಶಾಂತ ಎಲೆಕ್ಟಿಕಲ್ಸ್ & ಇಂಜಿನಿಯರಿಂಗ್ ಪ್ರೈ.ಲಿ. ಉಡುಪಿ ಇದರ ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಉಚ್ಚಿಲ, 
ಫ್ರೆಂಡ್ಸ್ ಕೆಟರರ್ಸ್ ಶಂಕರಪುರ ಮಾಲಕರಾದ  
ನವೀನ್ ಅಮೀನ್, ಪತ್ರಕರ್ತ ರಾಕೇಶ್ ಕುಂಜೂರು, ಇನ್ನಂಜೆಯ ಉದ್ಯಮಿ ದಿನೇಶ್ ಶೆಟ್ಟಿ ಕಲ್ಯಾಲು, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಸೇನೆ ಮಡುಂಬು ಇದರ ಅಧ್ಯಕ್ಷರಾದ 
ದೀಪಕ್ ಶೆಟ್ಟಿ ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 
ಶಾರದಾ ಆರ್ಟ್ಸ್ ಕಲಾವಿದರು (ರಿ.)  ಮಂಜೇಶ್ವರ ಅಭಿನಯದ ಒಂತೆ ಲೇಟಾಂಡ್ ಆಂಡಲಾ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಯುವಸೇನೆ ಮಡುಂಬು ವೈ.ಎಸ್.ಎಮ್.ಫ್ರೆಂಡ್ಸ್ ಮಡುಂಬು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Additional image
10 Mar 2026, 11:25 AM
Category: Kaup
Tags: