ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಸಂತೋಷ ಕೂಟ
Thumbnail

ಪಡುಬಿದ್ರಿ : ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಸಂತೋಷ ಕೂಟವು ರಿವರ್ ಶೈನ್ ಕಯಾಕಿಂಗ್ ಮತ್ತು ಅಡ್ವೆಂಚರ್, ಚೆನ್ನಯ ಕುದುರು ಮುಲ್ಕಿ ಇಲ್ಲಿ ಜರಗಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ಭಾಗವಹಿಸಿ ಮಾತನಾಡಿ, ಯುವವಾಹಿನಿ ಸಂಸ್ಥೆಯು ಸಂಘಟನಾತ್ಮಕವಾಗಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ವಿದ್ಯೆ ಉದ್ಯೋಗ ಸಂಪರ್ಕದ ಧ್ಯೇಯದ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.

ಪಡುಬಿದ್ರಿ ಘಟಕದ ಮಾಜಿ ಅಧ್ಯಕ್ಷೆ, ನಿವೃತ್ತ ಮುಖ್ಯ ಶಿಕ್ಷಕಿ ಚಿತ್ರಾಕ್ಷಿ ಕೆ ಕೋಟ್ಯಾನ್ ಅವರು ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಿಧಿತ್ ಪೂಜಾರಿ ಕರ್ನಿರೆ ವಹಿಸಿದ್ದರು.

ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರಾದ ಮಮತಾ ಅಂಚನ್, ಪಡುಬಿದ್ರಿ ಘಟಕದ ಕಾರ್ಯದರ್ಶಿ ಭಾಸ್ಕರ್ ಎನ್ ಅಂಚನ್, ಕೋಶಾಧಿಕಾರಿ ತುಳಸಿ ಕರುಣಾಕರ್, ಮಹಿಳಾ ನಿರ್ದೇಶಕರಾದ ಲತಾ ವಸಂತ್, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಮಂಡಳಿ ಪಡುಬಿದ್ರಿ ಇದರ ಅಧ್ಯಕ್ಷರಾದ ಸುಜಾತಾ ಹರೀಶ್  ಉಪಸ್ಥಿತರಿದ್ದರು.

ಹರೀಶ್ ಕೋಟ್ಯಾನ್ ಉಳ್ಳೂರು ಮತ್ತು ರವಿರಾಜ್ ಎನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಘಟಕದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

Additional image
10 Mar 2026, 12:00 PM
Category: Kaup
Tags: