ಮಾ.24 - 25 : ಕಾಪುವಿನಲ್ಲಿ ಪ್ರಸಿದ್ಧ ಸುಗ್ಗಿ ಮಾರಿಪೂಜೆ
Thumbnail

ಕಾಪು : ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜೆ ಇದೇ ಬರುವ ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ನಡೆಯಲಿದೆ.

 ದೇವಳಕ್ಕೆ ಬರುವ ಭಕ್ತಾದಿಗಳಿಗೆ ದೇವಿಯ ದರುಶನಕ್ಕೆ ಸರತಿ ಸಾಲಿನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಹಣ್ಣುಕಾಯಿ, ಕುರಿ - ಕೋಳಿ ಹರಕೆ ಸಮರ್ಪಣೆಗೆ ವ್ಯವಸ್ಥೆ ಮತ್ತು ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕಾರ್ಯನಿರ್ವಹಣಾಧಿಕಾರಿ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಮಾತೃ ವೈಭವ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

21 Mar 2026, 05:25 PM
Category: Kaup
Tags: