ಕಾಪು : ಇತಿಹಾಸ ಪ್ರಸಿದ್ದ ಬೊಲ್ಲೆಟ್ಟು ಆದಿ ಅಲಡೆ ಜೀರ್ಣೋದ್ಧಾರ ಸಮಿತಿಯ ಅಶ್ರಯದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಮಾರ್ಚ್ 28 ರ ಬೆಳಿಗ್ಗೆ 8.30 ಕ್ಕೆ ಬೊಲ್ಲೆಟ್ಟು ಆಲಡೆಯಲ್ಲಿ ನಡೆಯಲಿದೆ.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರ ಅದಮಾರು ಮಠದ ಹಿರಿಯ ಯತಿಗಳಾದ ಪರಮಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಶಿಲಾನ್ಯಾಸ ಹಾಗೂ ಆಶೀರ್ವಚನ ನೀಡಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಕರ್ನಾಟಕ ಸರಕಾರದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಹಾರಾಷ್ಟ್ರದ ಮಾಜಿ ಸಂಸದ ಗೋಪಾಲ್ ಎಂ. ಶೆಟ್ಟಿ, ಕುತ್ಯಾರು ಆರಮನೆ ಜಿನೇಶ್ ಬಲ್ಲಾಳ್, ಜಾನಪದ ಸಂಶೋಧಕ ಕೆ.ಎಲ್. ಕುಂಡಂತ್ತಾಯ, ಎಲ್ಲೂರು ಗುತ್ತು ವೈ. ಪ್ರಭಾಕರ್ ಶೆಟ್ಟಿ ಹಾಗೂ ವೈ. ಪ್ರಪುಲ್ಲ ಶೆಟ್ಟಿ, ನ್ಯಾಯವಾದಿ ಪ್ರದೀಪ್ ಕುಮಾರ್, ಅದಾನಿ ಗ್ರೂಪ್ ಸಿ. ಇ. ಒ. ಕಿಶೋರ್ ಆಳ್ವ ಭಾಗವಹಿಸಲಿದ್ದಾರೆ.
ಬೊಲ್ಲೆಟ್ಟು ಆದಿ ಅಲಡೆ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಸದಸ್ಯರು, ತಂತ್ರಿಗಳಾದ ಸಜೆ ಹರೀಶ್ ಜೋಯಿಸ, ಪ್ರಧಾನ ಅರ್ಚಕ ಗಣೇಶ್ ಜಿ. ಭಟ್ ಹಾಗೂ ಪವಿತ್ರಪಾಣಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
