ಪಡುಬಿದ್ರಿ ಬಿಲ್ಲವ ಸಂಘ, ಮಹಿಳಾ ಮಂಡಳಿ, ಕಲ್ಪತರು ಸ್ವಸಹಾಯ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ
ಪಡುಬಿದ್ರಿ : ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.), ನಾರಾಯಣ ಗುರು ಮಹಿಳಾ ಮಂಡಳಿ, ಕಲ್ಪತರು ಸ್ವಸಹಾಯ ಸಂಘದ ಸದಸ್ಯರು ಗುರುವಾರ ಕಟಪಾಡಿಯ ಕಾರುಣ್ಯ ವೃದ್ಧಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಆಶ್ರಮ ವಾಸಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ, ಊಟೋಪಚಾರಕ್ಕಾಗಿ ರೂ. 10,000 ಧನ ಸಹಾಯ ನೀಡಲಾಯಿತು.
ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ರವರು ವ್ಯವಸ್ಥಿತವಾಗಿ ವೃದ್ಧರನ್ನು ಪಾಲನೆ ಪೋಷಣೆ ಮಾಡುತ್ತಿರುವ ಆಶ್ರಮದ ಸಂಚಾಲಕರಿಗೆ ಅಭಿನಂದನೆ ತಿಳಿಸಿದರು.
ಕಲ್ಯಾಣಿ ರವಿ ಅಂಚನ್ ರವರು ಆಶ್ರಮದ ಬಗ್ಗೆ ಮಾತನಾಡಿದರು.
ಈ ಸಂದರ್ಭ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಹರೀಶ್, ಕಾರ್ಯದರ್ಶಿ ನೀತಾ ಗುರುರಾಜ್ ಉಪಸ್ಥಿತರಿದ್ದರು.
ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಆಶ್ರಮ ವಾಸಿಗಳೊಂದಿಗೆ ಕಾಲಕಳೆದು, ಅವರ ಪ್ರೀತಿ, ಆಶೀರ್ವಾದ ಪಡೆದರು.
