ಕಾಪು : ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಕೆಎಯುಪಿ ಉಡುಪಿ ಜಿಲ್ಲೆ, ಆಂತರಿಕ ಗುಣಮಟ್ಟ ಭರವಸೆ ಕೋಶ ಯೂತ್ ರೆಡ್ ಕ್ರಾಸ್, ಎನ್ಎಸ್ಎಸ್, ರೋವರ್ಸ್ -ರೇಂಜರ್ಸ್ ಘಟಕ, ಹಳೆಯ ವಿದ್ಯಾರ್ಥಿಗಳ ಸಂಘ, ವಿದ್ಯಾರ್ಥಿ ಕಲ್ಯಾಣ ಸಮಿತಿ
ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ರಕ್ತ ಬ್ಯಾಂಕ್ ಘಟಕ, ಜಿಲ್ಲಾ ಆಸ್ಪತ್ರೆ ಉಡುಪಿ, ಶ್ರೀ ದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಕಾಪು, ಜೆಸಿಐ ಕಾಪು ಆಯೋಜನೆಯಲ್ಲಿ ರಕ್ತದಾನ ಶಿಬಿರದ
ಉದ್ಘಾಟನಾ ಕಾರ್ಯಕ್ರಮವು ಮಾ.27 ರಂದು ಬೆಳಿಗ್ಗೆ 09:30 ರಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ
ಕಾರ್ಯಕ್ರಮವನ್ನು ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಉಡುಪಿ ಇದರ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ರಕ್ತನಿಧಿ ಘಟಕ, ಜಿಲ್ಲಾ ಆಸ್ಪತ್ರೆ ಉಡುಪಿ ಮುಖ್ಯಸ್ಥೆ ಡಾ. ವೀಣಾ, ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಕಾಪು ಇದರ ಅಧ್ಯಕ್ಷರಾದ ಪ್ರಭಾಕರ ಅಮೀನ್, ಕಾಪು ಜೆಸಿಐ ಅಧ್ಯಕ್ಷರಾದ ವಿಕ್ಕಿ ಪೂಜಾರಿ ಮಡುಂಬು ಭಾಗವಹಿಸಲಿದ್ದಾರೆ.
IQAC ಸಂಯೋಜಕಿ ಡಾ. ರೋಶನಿ ಯಶವಂತ, YRC ಸಂಯೋಜಕ ಡಾ.ರಾಘವ ನಾಯ್ಕ, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ದೀಪಿಕಾ ಸುವರ್ಣ, ಎನ್.ಎಸ್.ಎಸ್ ಸಂಯೋಜಕಿ ಮಂಜುಳಾ ಎಚ್ ಎಸ್, ರೋವರ್ಸ್ - ರೇಂಜರ್ ಘಟಕ ಸಂಯೋಜಕಿ ಸವಿತಾ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
