ಪಡುಬಿದ್ರಿ : ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಇಲ್ಲಿಯ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ಜರುಗಿತು.
ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, 2025 ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಡಿಗ್ರಿ ಪರೀಕ್ಷೆಯಲ್ಲಿ ಶೇಕಡಾ 80 ಪಡೆದ ಮೂಡುಕರೆ ಗ್ರಾಮಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ ರವೀಂದ್ರ ಎಮ್ ಶೆಟ್ಟಿ ಗರಡಿ ಮನೆ ಹೆಜಮಾಡಿ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಸೇವಾ ಸಮಿತಿಯ ಅಧ್ಯಕ್ಷರಾದ ಸುಧೀಶ್ ಜೆ ಶೆಟ್ಟಿ, ರವೀಂದ್ರ ಗೋಪಾಲ್ ಶೆಟ್ಟಿ ಗರಡಿ ಮನೆ ಹೆಜಮಾಡಿ, ಪ್ರೇಮಾ ನಾಥ್ ಶೆಟ್ಟಿ, ಶಿವಾನಂದ ಆರ್ ಕೋಟ್ಯಾನ್, ಮಹೇಶ್ ಶೆಟ್ಟಿ ಗರಡಿ ಮನೆ, ಚಂದ್ರ ಪೂಜಾರಿ ನಟ್ಟಿಮನೆ ಹೆಜಮಾಡಿ, ಸುಂದರ ಗುರಿಕಾರರು ಉಪಸ್ಥಿತರಿದ್ದರು.
ಸುಧೀಶ್ ಜೆ ಶೆಟ್ಟಿ ಸ್ವಾಗತಿಸಿ, ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
